ವಿಟ್ಲ : ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವಿಟ್ಲ ಸಮೀಪದ ಉಕ್ಕುಡದಲ್ಲಿ ನಡೆದಿದೆ.
ವಿಟ್ಲದ ಅನಂತೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ಉಕ್ಕುಡ ನಿವಾಸಿ ರಜತ್ ಭಟ್ರವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ರಜತ್ ಭಟ್ ರವರು ಹೆಂಡತಿ ಮತ್ತು 2 ಮಕ್ಕಳೊಂದಿಗೆ ವಾಸವಾಗಿದ್ರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.