Home Crime ಬ್ರಹ್ಮಾವರ : ಯುವಕನೋರ್ವ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ…!!

ಬ್ರಹ್ಮಾವರ : ಯುವಕನೋರ್ವ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವಕನೋರ್ವ ವಿಪರೀತ ಮದ್ಯಪಾನ ಚಟದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರವೀಣ್ ಶೆಟ್ಟಿ ಎಂದು ತಿಳಿಯಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಪ್ರಶಾಂತ್‌ ಶೆಟ್ಟಿ (38),ಹನೇಹಳ್ಳಿ ಗ್ರಾಮ ಬ್ರಹ್ಮಾವರ ಇವರ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿದಾರರ ತಮ್ಮ ಪ್ರವೀಣ ಶೆಟ್ಟಿ (37) ರವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿರುತ್ತಾರೆ. ದಿನಾಂಕ 28/11/2025 ರಂದು ಸಂಜೆ 16:30 ಗಂಟೆಗೆ ಪಿರ್ಯಾದಿದಾರರು ಮಂಗಳೂರಿನಲ್ಲಿರುವಾಗ ಸಂಬಂಧಿ ಶೀಲ ರವರು ಕರೆ ಮಾಡಿ ಈ ದಿನ ಸಂಜೆ ಪ್ರವೀಣ ವಿಪರೀತ ಮಧ್ಯಪಾನ ಮಾಡಿ ಮನೆಯಲ್ಲಿ ತಾಯಿಯೊಂದಿಗೆ ಜಗಳ ಮಾಡಿದ್ದು, ಈ ವಿಚಾರವನ್ನು ತಾಯಿ ಹಾಗೂ ತಮ್ಮ ಶಿವ ಪ್ರಸಾದ್‌ ಪ್ರಶ್ನಿಸಿದಕ್ಕೆ ಪ್ರವೀಣ ಶೆಟ್ಟಿ ತಾಯಿ ಹಾಗೂ ತಮ್ಮನಿಗೆ ಕಲಿಸುತ್ತೇನೆ ಎಂದು ಹೇಳಿ ಮನೆಯ ಕೋಣೆಯ ಒಳಗಿನಿಂದ ಬಾಗಿಲ ಚಿಲಕವನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೆಡ್‌ಶೀಟ್‌ ನ್ನು ಫ್ಯಾನ್‌ಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವವನ ಕಾಲು ಸ್ವಲ್ಪ ಅಲುಗಾಡುತ್ತಿದ್ದದನ್ನು ಕೋಣೆಯ ಕಿಟಕಿಯಿಂದ ತಮ್ಮ ಶಿವಪ್ರಸಾದ್‌ ನೋಡಿ ಕೋಣೆಯ ಒಳಗೆ ಕೋಲನ್ನು ಹಾಕಿ ಬಾಗಿಲು ತೆಗೆದು ನೇಣು ಬಿಚ್ಚಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಸಂಜೆ 18:15 ಗಂಟೆಗೆ ಬ್ರಹ್ಮಾವರ ಸಮುದಾಯ ಆಸ್ಪತ್ರೆಯ ವೈದ್ಯರು ಪ್ರವೀಣ್‌ ಶೆಟ್ಟಿರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 84/2025 ಕಲಂ: 194(3)(iv) BNSS ರಂತೆ ಪ್ರಕರಣ ದಾಖಲಾಗಿರುತ್ತದೆ.