ಕಾರ್ಕಳ: ನಗರದ ಸಮೀಪ ವ್ಯಕ್ತಿಯೋರ್ವರು ಹುಲ್ಲು ತೆಗೆಯಲು ಹೋದ ಸಮಯದಲ್ಲಿ ಶಾಂಭವಿ ಹೊಳೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದವರು ಸಾಣುರು ಗ್ರಾಮದ ಪ್ರವೀಣ್ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ : ಪಿರ್ಯಾದುದಾರ ರಾಧಾ (45) ಸಾಣುರು ಗ್ರಾಮ ಇವರ ಗಂಡ ಪ್ರವೀಣ್ (48) ಇವರು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಖಂಡಿಗ ಬರ್ಕೆ ಮನೆ ಎಂಬಲ್ಲಿ ವಾಸವಾಗಿ ಕೃಷಿ ಕೆಲಸವನ್ನು ಮಾಡಿಕೊಂಡಿದ್ದು ನಿನ್ನೆ ದಿನಾಂಕ: 03.09.2025 ರಂದು ಸಂಜೆ 4:00 ಗಂಟೆಗೆ ಮನೆಯಿಂದ ಸುಮಾರು 500 ಮೀಟರ್ ದೂರ ಇರುವ ನಾಗನಕಟ್ಟೆಯ ಬಳಿ ಹುಲ್ಲು ತೆಗೆಯಲು ಹೋಗಿದ್ದು ತುಂಬಾ ಸಮಯ ಮನೆಗೆ ಬಾರದ ಇದ್ದು ಹುಡುಕಾಡಿದಲ್ಲಿ ರಾತ್ರಿ ಸಮಯ ಸುಮಾರು 23:30 ಗಂಟೆಗೆ ಶಾಂಬವಿ ಹೊಳೆಯಲ್ಲಿಮೃತ ದೇಹ ಇರುವುದಾಗಿ ಪಿರ್ಯಾದುದಾರರ ಮಾವ ಅಶೋಕ ರವರು ತಿಳಿಸಿರುತ್ತಾರೆ . ಮೃತರು ಹುಲ್ಲು ತೆಗೆಯಲು ಹೋದ ಸಮಯ ಶಾಂಬವಿ ಹೊಳೆಯಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರಬಹುದಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್‌ಕ್ರಮಾಂಕ: 38/2025 ಕಲಂ 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.