Home Crime ಬೈಂದೂರು : ಬೈಕಿನ ಮೇಲೆ ತೆಂಗಿನ ಮರದ ಬುಡ ಬಿದ್ದು ವ್ಯಕ್ತಿಯೊಬ್ಬರು ಸಾವು…!!

ಬೈಂದೂರು : ಬೈಕಿನ ಮೇಲೆ ತೆಂಗಿನ ಮರದ ಬುಡ ಬಿದ್ದು ವ್ಯಕ್ತಿಯೊಬ್ಬರು ಸಾವು…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ತೆಂಗಿನ ಮರದ ಬುಡ ತುಂಡಾಗಿ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಶಿರೂರು ಗ್ರಾಮದ ನಿವಾಸಿ ರಾಮ ಎಂದು ತಿಳಿಯಲಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಶ್ರೀಧರ (54),ಶಿರೂರು ಗ್ರಾಮ ಬೈಂದೂರು ಇವರ ತಮ್ಮ ರಾಮ (52) ರವರು ದಿನಾಂಕ 15/08/2025 ರಂದು ಮಧ್ಯಾಹ್ನ 02:45 ಗಂಟೆಗೆ ತನ್ನ ಸ್ನೇಹಿತ ಚಂದ್ರ ರವೊಂದಿಗೆ ಮೀನು ಹಿಡಿಯಲು ಸ್ನೇಹಿತನ KA-20-EV-5975 ನಂಬ್ರನ ಮೋಟರ್‌ ಸೈಕಲ್ ನಲ್ಲಿ ತೆರಳುತ್ತಿದ್ದಾಗ ಶಿರೂರು ಗ್ರಾಮದ ಕಳಿಹಿತ್ಲು ಸಮುದ್ರದ ಬಳಿ ಕಾಂಕ್ರೇಟ್‌ ರಸ್ತೆಯಲ್ಲಿ ತೆರಳುತ್ತಿರುವಾಗ ವೀಪರಿತ ಗಾಳಿ ಮಳೆಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ ಬುಡ ತುಂಡಾಗಿ ಅವರು ಹೋಗುತ್ತಿದ್ದ ಮೋಟರ್‌ ಸೈಕಲ್‌ ಮೇಲೆ ಬಿದ್ದಿದ್ದು ರಾಮನಿಗೆ ತೆಲೆಗೆ ಮತ್ತು ಮೈಕೈ ಯಿಗೆ ಹಾಗೂ ಚಂದ್ರನಿಗೆ ಮೈ ಗೆ ಪೆಟ್ಟಾಗಿದ್ದು ಅವರಿಬ್ಬರನ್ನು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಗಂಬೀರವಾಗಿ ಗಾಯಗೊಂಡ ತಮ್ಮ ರಾಮ ರವರು ಮೂಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ದಿನಾಂಕ 24/08/2025 ರಂದು ಬೆಳಗಿನ ಜಾವ 01:53 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 37/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.