Home Kundapura News ಕೋಟ : ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ

ಕೋಟ : ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ

ಕೋಟ : ಈಜು ತರಬೇತುದಾರ ಗುಂಡ್ಮಿಯ ಗೋಪಾಲ ಖಾರ್ವಿ ಅವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಗೋಪಾಲ ಖಾರ್ವಿಯ ಸಂಬಂಧಿಗಳಾದ ರವೀಂದ್ರ ಖಾರ್ವಿ ಮತ್ತು ಪ್ರೀತು ವ್ಯವಹಾರದ ಸಲುವಾಗಿ 9,50,000 ರೂಪಾಯಿ ಹಣವನ್ನು ಗೋಪಾಲ ಖಾರ್ವಿ ಅವರಿಂದ ಪಡೆದುಕೊಂಡಿದ್ದರು.

 

ಇದರಲ್ಲಿ 6,27,000ರೂ. ಹಣವನ್ನು ವಾಪಾಸು ನೀಡಿದ್ದರು. ಉಳಿದ 3,23,000ರೂ. ಹಣ ನೀಡದೆ ಸತಾಯಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ನ್ಯಾಯಾಲಯದ ಖಾಸಗಿ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2026ಕಲಂ:316(2), 318(4), 351, 352 R/w 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ .