Home Karkala News ಕಣಜಾರು ಗಸ್ತು ಅರಣ್ಯ ಪಾಲಕ ಶ್ರೀಧರ್ ವರ್ಗಾವಣೆ

ಕಣಜಾರು ಗಸ್ತು ಅರಣ್ಯ ಪಾಲಕ ಶ್ರೀಧರ್ ವರ್ಗಾವಣೆ

ಕಾರ್ಕಳ : ಕುಂದಾಪುರ ವಿಭಾಗ ಮೂಡುಬಿದಿರೆ ಉಪವಿಭಾಗ ಕಾರ್ಕಳ ವಲಯ ಕಣಜಾರು ಅರಣ್ಯ ಪಾಲಕ ಶ್ರೀಧರ್ ಮಲ್ಲಿಕಾರ್ಜುನ್ ನರೇಗಲ್ ಅವರು ಬಾಗಲಕೋಟೆ ಸಾಮಾಜಿಕ ಅರಣ್ಯ ವಿಭಾಗ ಜಮಖಂಡಿ ಉಪವಿಭಾಗ ಬೀಳಗಿ ಸಾಮಾಜಿಕ ವಲಯಕ್ಕೆ ವರ್ಗಾವಣೆಯಾಗಿದ್ದಾರೆ.

 

ಮೂಲತ: ಬಾಗಲಕೋಟೆಯವರಾದ ಶ್ರೀಧರ್ ಅವರು 2008ರಲ್ಲಿ ಉಡುಪಿಯಲ್ಲಿ ಅರಣ್ಯ ವೀಕ್ಷಕರಾಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, 2013ರಲ್ಲಿ ಗಸ್ತು ಅರಣ್ಯ ಪಾಲಕರಾಗಿ ಬಡ್ತಿ ಹೊಂದಿ 2015ರವರೆಗೆ ಉಡುಪಿ ವಲಯ ಹಿರಿಯಡಕ ಘಟಕ ಬೊಮ್ಮರಬೆಟ್ಟಿನಲ್ಲಿ ಕಾರ್ಯನಿರ್ವಹಿಸಿ ಬಳಿಕ 2021ರವರೆಗೆ ಕಾರ್ಕಳ ವಲಯ ನೀರೆಯಲ್ಲಿ ಕರ್ತವ್ಯ ಸಲ್ಲಿಸಿ ಬಳಿಕ 2021ರಿಂದ ಕಣಜಾರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.