ಉಡುಪಿ : ಮಾನ್ಯ ಶಾಸಕ ಯಶ್ ಪಾಲ್ ಸುವರ್ಣ ಅವರೇ ನೀವು ಸಂವಿಧಾನ ಬದ್ಧ ಹುದ್ದೆಯಲ್ಲಿದ್ದೀರಿ ಎನ್ನುವುದನ್ನು ಮರೆತು ಗೂಂಡಾ ಎನ್ನುವ ರೀತಿ ಮಾತಾನಾಡುತ್ತಿದ್ದೀರಿ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಹೆಸರಾಂತ ಮಾಧ್ಯಮ ಒಂದರಲ್ಲಿ ಸಮೀರ್ ಎಂ ಡಿ ವಿರುದ್ಧ ಹೇಳಿಕೆ ನೀಡುವ ಬರದಲ್ಲಿ ಶಾಸಕ ಎನ್ನುವುದನ್ನು ಮರೆತು ಅಸಂವಿದಾನಿಕವಾಗಿ ಯಶ್ ಪಾಲ್ ಸುವರ್ಣ ವರ್ತಿಸಿರುವುದು ಶಾಸಕರ ಹುದ್ದೆಗೆ ಅಪಮಾನ ಮಾಡಿದಂತೆ. ಮಂಗಳೂರಿನಲ್ಲಿ ಇದ್ದಿದ್ದಕ್ಕೆ ನೀನು ಬಚಾವಾದೆ ಉಡುಪಿಯಲ್ಲಿ ಇದ್ದಿದ್ದರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡುತ್ತಿದೆ ಎಂದು ಹೇಳುವ ಮೂಲಕ ಶಾಸಕರು ದ್ರಾಷ್ಟ್ಯ ಮೆರೆದಿದ್ದಾರೆ.
ನೀವು ರೌಡಿಶೀಟರ್ ಆಗಿದ್ದಾಗ ಇಂತಹ ಹೇಳಿಕೆ ಕೊಡಬಹುದಿತ್ತು, ಅದು ನಿಮಗೆ ಬಿಟ್ಟಿದ್ದು. ಆದರೆ ಉಡುಪಿ ಕ್ಷೇತ್ರದ ಸನ್ಮಾನಿತ ಶಾಸಕನ ಪದವಿಯಲ್ಲಿ ನಿಂತು ಈ ರೀತಿಯಾಗಿ ಹೇಳಿಕೆ ಕೊಡುತ್ತಿರುವುದು ಯಾರನ್ನ ಮೆಚ್ಚಿಸಲು ಎನ್ನುವುದು ಗೊತ್ತಿಲ್ಲ. ನೀವು ನಿಮ್ಮ ಗೌರವವನ್ನು ಮರೆತು ಮಾತನಾಡಿರಬಹುದು ಆದರೆ ಉಡುಪಿ ಶಾಸಕರ ಸ್ಥಾನಕ್ಕೆ ದೊಡ್ಡ ಗೌರವವಿದೆ ಸಾಕಷ್ಟು ಇತಿಹಾಸವಿದೆ ಅದನ್ನ ಮಣ್ಣಿಗೆ ಸೇರಿಸುವ ಕೆಲಸ ಮಾಡಬೇಡಿ ಇನ್ನಾದರೂ ಮಾನವರಂತೆ ವರ್ತಿಸಿ. ನಿಮ್ಮ ಹಳೆ ಚಾಳಿ ಎನ್ನುವಂತೆ ಸದನದಲ್ಲೂ ಕೂಡ ಪೇಪರ್ ಎಸೆಯುವುದು, ಶರ್ಟ್ ಬಟನ್ ತೆಗೆದುಕೊಂಡು ಕೈ ಎತ್ತುವುದು ಮಾಡುವುದರ ಬದಲು ಇನ್ನಾದರೂ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸಿ ಎಂದು ಅರುಣ್ ಕುಂದರ್ ಹೇಳಿದ್ದಾರೆ.