ಬೈಂದೂರು: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮುಳ್ಳಿಕಟ್ಟೆ ನಾಯಕವಾಡಿ ಸಂಪರ್ಕಿಸುವ ಮುಖ್ಯರಸ್ತೆಯ ಬದಿಯಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಆದಿತ್ಯವಾರ ಬೆಳಗಿನ ವೇಳೆಯಲ್ಲಿ ಮನೆಯಲ್ಲಿ ಬಳಸಿದ ಕಸವನ್ನು ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ.
ಗುಜ್ಜಾಡಿ ಗ್ರಾಮದ ಶೆಟ್ರು ಮನೆ ನಿವಾಸಿಗಳು ನಿನ್ನಯ ಸಂಜೆ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಹಾಗೂ ಕಸ ಬಿಸಾಡಿ ಹೋದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿ ಗಣೇಶ್ ಶೆಟ್ಟಿಯವರು ದೂರು ನೀಡಿದ್ದಾರೆ.
ಈ ವೇಳೆ ತಮ್ಮಯ್ಯ ದೇವಾಡಿಗ ರವರು ನಿವಾಸಿಗಳ ದೂರಿಗೆ ಸ್ಪಂದಿಸಿ ಇಂದು ಆದಿತ್ಯವಾರ ರಜೆ ಇದ್ದ ಕಾರಣ ಸೋಮವಾರ ಕಸ ಬಿಸಾಡಿದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಸೋಮವಾರ ಈ ವಿಚಾರದ ಬಗ್ಗೆ ಯಾವ ಕ್ರಮ ಕೈಗೊಳ್ಳಲು ಕಾದು ನೋಡಬೇಕಾಗಿದೆ.





