ಕಾರ್ಕಳ : ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ಜನವರಿಯಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಬೈಲೂರು, ಹಿರ್ಗಾನದ ಶ್ರಜನ್ ಶೆಟ್ಟಿ ಅವರು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.
ಇವರು ದಿ. ಸೀತಾರಾಮ ಶೆಟ್ಟಿ ಹಾಗೂ ಸುಮಿತ್ರಾ ಶೆಟ್ಟಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಹಿರ್ಗಾನ ಸೈಂಟ್ ಮರಿಯ ಗೊರಟ್ಟಿ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದು, ಕಟಪಾಡಿ ತ್ರಿಷಾ ವಿದ್ಯಾ ಕಾಲೇಜಿನಲ್ಲಿ ಸಿಎ ಶಿಕ್ಷಣ ಪಡೆದಿರುತ್ತಾರೆ.



