Home Crime ಬೈಂದೂರು :‌ ಗುಡಿಯಲ್ಲಿ ದೇವಿಯ ಕೊರಳಿನಲ್ಲಿದ್ದ‌ ಚಿನ್ನದ ಸರ ಕಳವು…!!

ಬೈಂದೂರು :‌ ಗುಡಿಯಲ್ಲಿ ದೇವಿಯ ಕೊರಳಿನಲ್ಲಿದ್ದ‌ ಚಿನ್ನದ ಸರ ಕಳವು…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಗಂಗನಾಡು ಮಹಿಷ ಮರ್ದಿನಿ ದೇವಸ್ಥಾನ ವನಕೊಡ್ಲು ದೇವಸ್ಥಾನದ ಹೊರ ಸುತ್ತಿನಲ್ಲಿರುವ ಮಹಿಷ ಮರ್ದಿನಿ ದೇವಿಯ ಗುಡಿಯಲ್ಲಿ ದೇವಿಯ ಕೊರಳಿನಲ್ಲಿದ್ದ‌ ಚಿನ್ನದ ಸರ ಕಳ್ಳತನವಾದ ಘಟನೆ ನಡೆದಿದೆ.

ಈ ಘಟನೆ ಬಗ್ಗೆ ಕುಮಾರ ಎಂಬವರು‌ ಬೈಂದೂರು ಪೊಲೀಸರಿಗೆ ದೂರು‌ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ವಿವರ : ದಿನಾಂಕ 22/08/2025 ರಂದು ಬೈಂದೂರು ಗಂಗನಾಡು ಮಹಿಷ ಮರ್ದಿನಿ ದೇವಸ್ಥಾನ ವನಕೊಡ್ಲು ದೇವಸ್ಥಾನದ ಹೊರ ಸುತ್ತಿನಲ್ಲಿರುವ ಮಹಿಷ ಮರ್ದಿನಿ ದೇವಿಯ ಗುಡಿಯಲ್ಲಿ ದೇವಿಯ ಕೊರಳಿನಲ್ಲಿದ್ದ ಸುಮಾರು 2 ಪವನ್‌ ತೂಕದ ಚಿನ್ನದ 2 ಚಿನ್ನದ ತಾಳಿ ಇರುವ ಚಿನ್ನದ ಕರಿಮಣಿ ಸರವು ಕಳವಾಗಿರುವುದು ದಿನಾಂಕ 23/08/2025 ರಂದು ಬೆಳಿಗ್ಗೆ 9:30 ಗಂಟೆಗೆ ದೇವಸ್ಥಾನದ ಅರ್ಚಕರು ಪೂಜೆಗೆ ಹೋದಾಗ ತಿಳಿದು ಬಂದಿದ್ದು ಈ ದೇವಸ್ಥಾನಕ್ಕೆ ದಿನಾಂಕ 22/08/2025 ರಂದು ಮದ್ಯಾಹ್ನ 11:30 ಗಂಟೆಯಿಂದ 12:00 ಗಂಟೆಯ ಮದ್ಯದ ಅವಧಿಯಲ್ಲಿ ಭಕ್ತಾದಿಯಾಗಿ ಬಂದ 30 ವರ್ಷದ ಗಂಡಸು ಮತ್ತು 40 ವರ್ಷದೊಳಗಿನ ಮಹಿಳೆ ಯ ಮೇಲೆ ಸಂಶಯವಿರುವುದಾಗಿ ಕುಮಾರ (41),ಗಂಗನಾಡು, ಬೈಂದೂರು ಇವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 155/2025 ಕಲಂ: 331 (3) 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.