Home Crime ಸಂಬಂಧಿಯಿಂದಲೇ ತಾಯಿಯಾದ ಅಪ್ರಾಪ್ತ ಬಾಲಕಿ : ಹೆರಿಗೆ ವೇಳೆ ಮಗು ಮೃತ್ಯು…!!

ಸಂಬಂಧಿಯಿಂದಲೇ ತಾಯಿಯಾದ ಅಪ್ರಾಪ್ತ ಬಾಲಕಿ : ಹೆರಿಗೆ ವೇಳೆ ಮಗು ಮೃತ್ಯು…!!

ಸುಬ್ರಮಣ್ಯ: ಅಪ್ರಾಪ್ತ ಬಾಲಕಿಯೋರ್ವಳು ಸಂಬಂಧಿಯಿಂದಲೇ ತಾಯಿಯಾಗಿ ಹೆರಿಗೆ ವೇಳೆ ಮಗು ಮೃತಪಟ್ಟ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.

ಕೊಲ್ಲಮೊಗ್ರದ ಅಪ್ರಾಪ್ತ ಮೇಲೆ ಆಕೆಯ ಚಿಕ್ಕಮ್ಮನ ಮಗ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ತಿಳಿದು ಬಂದಿದೆ.

ಬಾಲಕಿಗೆ ಹೊಟ್ಟೆನೋವು ಎಂದು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಭಿಣಿ ಎಂಬುದು ತಿಳಿದು ಬಂದಿದೆ. ಬಾಲಕಿಗೆ 9 ತಿಂಗಳು ತುಂಬಿದ ಹಿನ್ನೆಲೆ ಹೆರಿಗೆಯಾಗಿದ್ದು, ಈ ಸಂದರ್ಭ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು‌ ಹೇಳಲಾಗಿದೆ.

ಈ ಕುರಿತು ಆರೋಪಿಯ ವಿರುದ್ಧ ಈಗಗಾಲೇ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.