Home Karavali Karnataka ಕುಂದಾಪುರ : ಬಾಲಕ ಮತ್ತು ಬಾಲಕಿಯರಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ…!!

ಕುಂದಾಪುರ : ಬಾಲಕ ಮತ್ತು ಬಾಲಕಿಯರಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ…!!

ಕುಂದಾಪುರ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಛೇರಿ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ ವಲಯ ಮತ್ತು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಿ ಕನ್ಯಾಣ.
ಇವರ ಸಂಯುಕ್ತ ಆಶ್ರಯದಲ್ಲಿ 14ರ ಮತ್ತು 17 ರ ವಯೋಮಾನದ ಬಾಲಕ ಮತ್ತು ಬಾಲಕಿಯರ
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ “ವಿಕ್ರಾಂತ ಪರ್ವ-2025” ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢ ಶಾಲೆ, ಕೋಡಿಕನ್ಯಾಣ ಇಂದು ಸಂಭ್ರಮದಲ್ಲಿ ನಸಲ್ಲಿಸಿದರ.

ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಬಡ್ಡಿ ಈ ನೆಲದ ಮೂಲ ಕ್ರೀಡೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಹಿನ್ನಲೆ ಇರುವ ಈ ಕ್ರೀಡೆಗೆ ದೈಹಿಕ ಸಾಮರ್ಥ್ಯದ ಜೊತೆ ಕೌಶಲವೂ ಅಗತ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಕಬಡ್ಡಿ ಇಂದು ಪ್ರೋ ಕಬಡ್ಡಿ ಮೂಲಕ ಭಾರತದಲ್ಲಿ ಜನಪ್ರಿಯ ಗೊಂಡಿದೆ. ಕಬಡ್ಡಿ ಆಟಗಾರನೂ ಈ ರಾಷ್ಟ್ರದ ಆಸ್ತಿ ಎಂದು ಪರಿಗಣಿಸುವುದು ನಮ್ಮ ,ನಿಮ್ಮ ಹಾಗೂ ಎಲ್ಲರ ಕರ್ತವ್ಯ. ಜಿಲ್ಲಾ ಮಟ್ಟಕ್ಕೆ ಆಗಮಿಸಿದ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು.

ಜಿಲ್ಲಾ ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಅವರು ಮಾತನಾಡಿ ಇಲ್ಲಿ ಗೆದ್ದಂತಹ ತಂಡಗಳು ಮುಂದೆ ನಡೆಯುವ ವಿಭಾಗ ಮಟ್ಟ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಬೀನಾ ಅಂಜುಮ್, ಶಂಕರ್ ಕುಂದರ್,ಡಾ. ಕೃಷ್ಣ ಕಾರಂತ್, ರಾಜೇಂದ್ರ ಸುವರ್ಣ, ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು, ವಿಜಯ್ ಕುಮಾರ್ ಶೆಟ್ಟಿ ಅಧ್ಯಕ್ಷರು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಜಯಕುಮಾರ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶ್ರೀರಾಮಚಂದ್ರ ಎಸ್ ಡಿ ಎಮ್ ಸಿ ಅಧ್ಯಕ್ಷರು, ರಾಘವೇಂದ್ರ ಅಡಿಗ ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜ್ ಕೋಡಿಕನ್ಯಾನ, ಶ್ರೀಮತಿ ರಾಧಿಕಾ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ಕೊಡಿಕನ್ಯಾನ, ವಿವಿಧ ತಾಲೂಕಿನ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀಮತಿ ಸಂಪಾ ಮುಖ್ಯ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಡಿಕನ್ಯಾನ ಸ್ವಾಗತಿಸಿದರು.

ಖ್ಯಾತ ವೀಕ್ಷಕ ವಿವರಣೆಗಾರ ದೈಹಿಕ ಶಿಕ್ಷಕರಾದ ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

ದೈಹಿಕ ಶಿಕ್ಷಕರಾದ ವಿಜಯ್ ಕುಮಾರ್ ಕೆ ವಂದಿಸಿದರು.