Home Crime ಕುಂದಾಪುರ : ಪೊಲೀಸರಿಂದ ನಾಲ್ವರು ಕಳ್ಳರ ಬಂಧನ…!!

ಕುಂದಾಪುರ : ಪೊಲೀಸರಿಂದ ನಾಲ್ವರು ಕಳ್ಳರ ಬಂಧನ…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಸಂತೆ ಮಾರುಕಟ್ಟೆ ಬಳಿ ಜು.14 ಮಧ್ಯರಾತ್ರಿ 2.30 ರ ಸುಮಾರಿಗೆ ಅಂಗಡಿಯ ಶಟರ್ ಬಾಗಿಲು ಒಡೆದು, 95 ಸಾವಿರ ರೂ. ಮೌಲ್ಯದ ತಾಮ್ರದ ವಯರ್, ಹಿತ್ತಾಳೆಯ ವಸ್ತುಗಳನ್ನು ಕಳ್ಳತನಗೈದಿದ್ದ ನಾಲ್ವರು ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ಮಂಗಳೂರಿನ ಸರ್ಫರಾಜ್ (33), ಜಾಕೀರ್ (36), ಮೊಹಮ್ಮದ್ ಅಲ್ಫಾಜ್ (26) ಹಾಗೂ ಮಂಜನಾಡಿಯ ಮೊಹಮ್ಮದ್ ರಿಯಾಜ್ (44) ಅವರನ್ನು ಉಡುಪಿಯ ಸಂತೆ ಕಟ್ಟೆಯಲ್ಲಿ ಬಂಧಿಸಲಾಗಿದೆ.

ಕುಂದಾಪುರ ನಗರ ಠಾಣಾ ಎಸ್ ಐಗಳಾದ ನಂಜಾ ನಾಯ್ಕ್, ಪುಷ್ಪಾ, ಸಂಚಾರ ಠಾಣಾ ಎಸ್ ಐ ನೂತನ್, ಸಿಬಂದಿಯಾದ ಮೋಹನ್, ಸಂತೋಷ್, ಪ್ರಿನ್ಸ್, ನಾಗೇಶ್, ಮಹಾಬಲ, ರೇವತಿ, ಘನಶ್ಯಾಮ್, ಸತೀಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಆರೋಪಿಗಳಿಂದ 50 ಕೆಜಿ ತೂಕದ ತಾಮ್ರದ ಸರಿಗೆ, 34 ಕೆಜಿ ತೂಕದ ತಾಮ್ರದ ಸರಿಗೆ, 64 ಕೆಜಿ ತೂಕದ ಹಿತ್ತಾಳೆಯ ವಸ್ತು, 20 ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಡ್ಜ್ ಕಂಪ್ರೆಸರ್, 45 ಹಳೆಯ ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.