Home Karavali Karnataka ಸಚಿವ ದಿನೇಶ್ ಗುಂಡೂರಾವ್ ಬುರ್ಖಾಧಾರಿ ಮಹಿಳೆಯಿಂದ ರಿವರ್ಸ್ ಲವ್ ಜಿಹಾದ್ ಗೆ ಒಳಗಾದವರು ಅವರಿಗೆ ಮುಸ್ಲಿಮರ...

ಸಚಿವ ದಿನೇಶ್ ಗುಂಡೂರಾವ್ ಬುರ್ಖಾಧಾರಿ ಮಹಿಳೆಯಿಂದ ರಿವರ್ಸ್ ಲವ್ ಜಿಹಾದ್ ಗೆ ಒಳಗಾದವರು ಅವರಿಗೆ ಮುಸ್ಲಿಮರ ಮೇಲೆ ಒಲವು ಜಾಸ್ತಿ : ಶಾಸಕ ಹರೀಶ್ ಪೂಂಜಾ…!!

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುರ್ಖಾಧಾರಿ ಮಹಿಳೆಯಿಂದ ರಿವರ್ಸ್ ಜಿಹಾದ್ ಗೆ ಒಳಗಾದವರು ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು ಹಿಂದೂಗಳ ಬದಲು ಗುಂಡೂರಾವ್ ಅವರಿಗೆ ಮುಸ್ಲಿಮರ ಮೇಲೆ ಒಲವು ಜಾಸ್ತಿ ಅವರು ರಿವರ್ಸ್ ಲವ್ ಜಿಹಾದ್ ಆಗಿರುವವರು ದಿನೇಶ್ ಗುಂಡೂರಾವ್ ಅದು ನಮ್ಮ ದುರ್ದೈವ. ನಾನು ಯಾಕೆ ಗುಂಡೂರಾವ್ ಬುರ್ಖಾ ಹಾಕಿದ ಸಚಿವ ಅಂತ ಹೇಳಿದೆ ಅಂದ್ರೆ ಅವರು ಮದುವೆ ಆಗಿದ್ದು ಮುಸ್ಲಿಂ ಸಮುದಾಯ ಮಹಿಳೆಯನ್ನು ಲವ್ ಜಿಹಾದ್ ಅಂದ್ರೆ ಹಿಂದು ಹುಡುಗಿಯವರನ್ನು ಮುಸ್ಲಿಂ ಯುವಕರು ಮದುವೆ ಆಗೋದು ಆದರೆ ಗುಂಡೂರಾವ್ ಅವರಲ್ಲಿ ಉಲ್ಟಾ ಆಗಿದೆ ದಿನೇಶ್ ಗುಂಡೂರಾವ್ ಅವರನ್ನು ಅವರ‌ ಹೆಂಡತಿ ಲವ್ ಜಿಹಾದ್‌ಗೆ ಒಳಪಡಿಸಿದ್ದಾರೆ ಹೀಗಾಗಿ ಹಿಂದುಗಳನ್ನು Third Graded Citizen ರೀತಿಯಲ್ಲಿ ನೋಡುತ್ತಾರೆ ಎಂದು ಮಂಗಳೂರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಕ್ರೋಶ ಹೊರಹಾಕಿದ್ದಾರೆ.