Home Latest ಮೇ 17ರಂದು ಮಲ್ಪೆ ಬೀಚ್‌ನಲ್ಲಿ ಸಾಂಪ್ರದಾಯಿಕ ಕ್ರೀಡೋತ್ಸವ..!!

ಮೇ 17ರಂದು ಮಲ್ಪೆ ಬೀಚ್‌ನಲ್ಲಿ ಸಾಂಪ್ರದಾಯಿಕ ಕ್ರೀಡೋತ್ಸವ..!!

ಉಡುಪಿ: ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾರುದ್ರ ಯಾಗದ ಅಂಗವಾಗಿ, ಮೇ 17ರಂದು ಮಲ್ಪೆ ಬೀಚ್‌ನಲ್ಲಿ ಸಂಪ್ರದಾಯಿಕ ಕ್ರೀಡೋತ್ಸವವನ್ನು  ಆಯೋಜಿಸಲಾಗಿದೆ.

ಪ್ರಸಾದ್ ರಾಜ್ ಕಾಂಚಾನ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಸ್ಥಳೀಯ ಸಂಪ್ರದಾಯ ಮತ್ತು ಕರಾವಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವಿಶೇಷ ಸ್ಪರ್ಧೆಗಳು ಜರುಗಲಿವೆ.

ಕೈರಂಪಣಿ ಮೀನುಗಾರಿಕೆ, ಕೈಬಲೆ ಬೀಸುವುದು, ಬೋಟ್ ರೇಸ್, ಲಗೋರಿ ಆಟ ಹಾಗೂ ಮರಳು ಕಲಾಕೃತಿ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.

ಬೋಟ್ ರೇಸ್‌ಗೆ ಮೊದಲ ಬಹುಮಾನವಾಗಿ ₹50,000, ದ್ವಿತೀಯ ಬಹುಮಾನ ₹25,000 ಹಾಗೂ ತೃತೀಯ ಬಹುಮಾನ ₹10,000 ನಿಗದಿಪಡಿಸಲಾಗಿದೆ. ಕೈರಂಪಣಿ ಮೀನುಗಾರಿಕೆ ಸ್ಪರ್ಧೆಯಲ್ಲಿ ₹30,000 ಮೊದಲ ಬಹುಮಾನವಿದ್ದು, ಇತರೆ ಸ್ಪರ್ಧೆಗಳಿಗೂ ಗಮನಾರ್ಹ ಬಹುಮಾನಗಳು ಇರಲಿವೆ.

ಈ ಸಂಪ್ರದಾಯಿಕ ಕ್ರೀಡೋತ್ಸವದಲ್ಲಿ ಭಾಗವಹಿಸಲು ಆಸಕ್ತರು ಶಾನ್ ರಾಜ್ ಅವರ ಮೊಬೈಲ್ ಸಂಖ್ಯೆ 7353666576 ಅಥವಾ 9964266576 ಅನ್ನು ಸಂಪರ್ಕಿಸಬಹುದಾಗಿದೆ.

ಕರಾವಳಿ ಸಂಸ್ಕೃತಿಯ ಸೊಬಗನ್ನು ತೋರಿಸುವ ಈ ಕ್ರೀಡೋತ್ಸವಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.