Home Latest ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ತೈಲ : ನಗರಸಭೆಯಿಂದ ತೆರವು ಕಾರ್ಯಚರಣೆ…!!

ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ತೈಲ : ನಗರಸಭೆಯಿಂದ ತೆರವು ಕಾರ್ಯಚರಣೆ…!!

ಉಡುಪಿ, ಜೂ.15: ತ್ರಿವೇಣಿ ಸರ್ಕಲ್ ಬಳಿ, ಯಾರೊ ಎಣ್ಣೆಯ ಕ್ಯಾನನ್ನು ಬೈಕಿನಲ್ಲಿ ಸಾಗಿಸುತ್ತಿದ್ದಾಗ, ಕ್ಯಾನ್ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದು, ಎಣ್ಣೆಯು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿ ಆಗಿರುವ ಘಟನೆ ಸೋಮವಾರ ನಡೆಯಿತು.

ಪರಿಣಾಮ ರಸ್ತೆಯಲ್ಲಿ ಜಾರುವ ಸ್ಥಿತಿ ನಿರ್ಮಾಣವಾಯಿತು. ಬೈಕು ಸವಾರರು ಎಡವಿ ಬಿದ್ದ ಘಟನೆಗಳು ನಡೆಯಿತು. ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎನ್ನುವುದನ್ನು ಮನಗಂಡ ಸ್ಥಳೀಯ ಪ್ರಸನ್ನ ಭಟ್ ಎನ್ನುವವರು, ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರ ಗಮನಕ್ಕೆ ತಂದಿದ್ದರು.

ತಕ್ಷಣ ಸ್ಪಂದಿಸಿದ ಒಳಕಾಡುವರು, ತೈಲ ಬಿದ್ದಿರುವ ಸ್ಥಳದಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಇಟ್ಟು, ವಾಹನಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು, ಘಟನೆಯನ್ನು ನಗರಸಭೆಯ ಪೌರಾಯುಕ್ತರ ಗಮನಕ್ಕೆ ತಂದರು. ಬಳಿಕ ಆರೋಗ್ಯ ಪರೀಕ್ಷಕ ಸತೀಶ್ ಅವರು, ಸ್ಥಳಕ್ಕೆ ನೀರಿನ ಟ್ಯಾಂಕರ್ ತರಿಸಿ, ತೈಲ ಬಿದ್ದಿರುವ ಸ್ಥಳವನ್ನು ಶುಚಿಗೊಳಿಸಿದರು. ನಗರಸಭೆಯ ತಕ್ಷಣದ ಸ್ಪಂದನೆಯಿಂದಾಗಿ ನಡೆಯ ಬಹುದಾಗಿದ್ದ ದುರಂತಗಳು ತಪ್ಪಿತೆನ್ನಬಹುದು.