Home Latest ಉಡುಪಿ: ಧರಣಿ ನಿರತ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಸರ್ವಾಧಿಕಾರಿ ಧೋರಣೆಯಾಗಿದ್ದು ಇದು ಖಂಡನೀಯ – ಕಾಂಗ್ರೆಸ್...

ಉಡುಪಿ: ಧರಣಿ ನಿರತ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಸರ್ವಾಧಿಕಾರಿ ಧೋರಣೆಯಾಗಿದ್ದು ಇದು ಖಂಡನೀಯ – ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ…!!

ಉಡುಪಿ : ಯುಜಿ ನೀಟ್​ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ರಾಜೀನಾಮೆಗೆ ಆಗ್ರಹಿಸಿ ಜಂತರ್​ ಮಂತರ್​ ನಿಂದ ಸಂಸತ್​ ಚಲೋ ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್​ ಮಂತರ್​ನ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್​ ಖಂಡನೀಯ ಎಂದು ಉಡುಪಿ ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಅಪ್ರಜಾತಾಂತ್ರಿಕ, ಸರ್ವಾಧಿಕಾರಿ ಧೋರಣೆ ಆತಂಕ ಮೂಡಿಸುತ್ತದೆ. ಈ ಬೆಳವಣಿಗೆ
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಎರಡು ತಿಂಗಳ ಬಳಿಕ ಪ್ರಧಾನಿ ಮೋದಿ ಇಂದು ಹೇಳಿಕೆ ನೀಡಿದ್ದಾರೆ.ಮೊದಲೇ ಪ್ರಧಾನಿ ಹೇಳಿಕೆ ನೀಡಿದ್ದಿದ್ದರೆ ವಿದ್ಯಾರ್ಥಿ ಸಮುದಾಯಕ್ಕೆ ಒಂದು ಭರವಸೆ ಮೂಡುತ್ತಿತ್ತು.ದುರದೃಷ್ಟದ ವಿಷಯವೆಂದರೆ ಕೇಂದ್ರದ ಎನ್ ಡಿಎ ಸರಕಾರದ ಸಚಿವರು ಈ ಬಗ್ಗೆ ಮೌನ ವಹಿಸಿದ್ದರು.ಇನ್ನಾದರೂ ಪ್ರಧಾನಿ‌ ಮೋದಿಯವರು ಧರ್ಮೇಂದ್ರ ಪ್ರದಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಆತ್ಮಹತ್ಯೆ ಮಾಡಿಕೊಂಡ ಎಲ್ಲ ನೀಟ್ ಆಕಾಂಕ್ಷಿಗಳ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಪ್ರಖ್ಯಾತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.