Home Crime ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ : ಸವಾರ ಮೃತ್ಯು…!!

ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ : ಸವಾರ ಮೃತ್ಯು…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಬೈಕ್ ಬಂದು ಟ್ಯಾಂಕರ್ ಗೆ ಢಿಕ್ಕಿ ಹೊಡೆದು ಅದರ ಪರಿಣಾಮ ‌ಗಂಭೀರ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಕೆಳಾರ್ಕಳಬೆಟ್ಟು ನಿವಾಸಿ ಸುಧಾಕರ್ ಎಂದು ತಿಳಿಯಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರ ಸಾತ್ವಿಕ್‌ (19) ಕೆಮ್ಮಣ್ಣು ರಸ್ತೆ, ನೇಜಾರ್‌, ಕೆಳಾರ್ಕಳಬೆಟ್ಟು ಗ್ರಾಮ ಇವರ ತಂದೆ ಸುಧಾಕರ (49) ಇವರು ದಿನಾಂಕ 16-09-2022 ರಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅವರ ಬಾಬ್ತು KA20S9120 ನೇ ಮೋಟಾರ್‌ ಸೈಕಲ್‌ ನ್ನು ವಾಹನಗಳು ಚಲಿಸುವ ಏಕಮುಖ ರಸ್ತೆಯಲ್ಲಿ ಚಲಾಯಿಸಿ ಎದುರಿನಿಂದ ಬರುತ್ತಿದ್ದ MH46F616 ನೇ ಟ್ಯಾಂಕರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಘಟನೆಗೆ ಸಂಬಂದಿಸಿದಂತೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2022 ಕಲಂ: 279, 338 IPC ಮತ್ತು ಕಲಂ: 218, 177 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿ, ಮಾನ್ಯ ನ್ಯಾಯಾಲಯದಲಲ್ಲಿ ವಿಚಾರಣೆಯಲ್ಲಿ ಇರುತ್ತದೆ. ಆದರೆ ಪಿರ್ಯಾದಿದಾರರ ತಂದೆಗೆ ತಲೆಗೆ ಆದ ಗಾಯದಿಂದ ಕೋಮಾ ಸ್ಥಿತಿಯಲ್ಲಿದ್ದು ಗುಣಮುಖರಾಗದೇ ಇದ್ದುದರಿಂದ ಮತ್ತು ರೂಮಿನಲ್ಲಿ ಮಲಗಿದ್ದವರು ಕೈಕಾಲು ಅಲ್ಲಾಡಿಸಲು ಮತ್ತು ಕಣ್ಣುಗಳನ್ನು ಮೇಲೆಕೆಳಗೆ ಮಾಡಿದ್ದರಿಂದ ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಂದೆಯನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾದೇ ಈ ದಿನ ದಿನಾಂಕ 05-08-2025 ರಂದು ಬೆಳಿಗ್ಗೆ 08:55 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ಕ್ರಮಾಂಕ: 46/2025 ಕಲಂ:194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.