ಮೈಸೂರು : ಗಾಂಜಾ ಸಂಗ್ರಹಿಸಿದ ಮಹಿಳೆಯನ್ನು ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸಲ್ಮಾ (50) ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯಿಂದ 26 ಕೆ ಜಿ ಗಾಂಜಾ ವಶಪಡಿಸಲಾಗಿದೆ.
ನಗರದ ಪೋರೋಂ ಮಾಲ್ ಬಳಿ ಗಾಂಜಾ ಬಚ್ಚಿಟ್ಟಿದ್ದರು. ಎಸಿಪಿಗಳಾದ ಮಹಮದ್ ರಾವತ್ಕರ್ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇನ್ಸಪೆಕ್ಟರ್ ಶಬ್ಬೀರ್ ಹುಸೇನ್, ಸಬ್ ಇನ್ಸಪೆಕ್ಟರ್ ಲೇಪಾಕ್ಷ ರಾಜು ಸೇರಿ ಹಲವರು ಭಾಗಿಯಾಗಿದ್ದರು.