ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಹತ್ತಿರ ಪಾದಚಾರಿಯೊಬ್ಬರಿಗೆ ಹೈಡ್ರಾ ಕ್ರೇನ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಚಣಿಲ ಎಂದು ತಿಳಿದು ಬಂದಿದೆ.
ಈ ಅಪಘಾತ ಸ್ಥಳಕ್ಕೆ ಹೆಬ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರ ಸಂತೋಷ್ ಕುಮಾರ (43) ಉಪ್ಪಳ ಮುದ್ರಾಡಿ ಅಂಚೆ ಮತು ಗ್ರಾಮ ಹೆಬ್ರಿ ಇವರು ದಿನಾಂಕ: 05/08/2025 ರಂದು ಮುದ್ರಾಡಿ ಪಂಚಾಯತ್‌ಗೆ ಹೋಗುವುದಕ್ಕಾಗಿ ಮುದ್ರಾಡಿ ಜಂಕ್ಷನ್‌ನಲ್ಲಿ ನಡೆದುಕೊಂಡು ಹೋಗುವಾಗ ಮುದ್ರಾಡಿ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಕಾರ್ಕಳ ರಸ್ತೆಯ ಎಡ ಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು ಸಮಯ ಸುಮಾರು 12.35 ಗಂಟೆಗೆ ಹೆಬ್ರಿ ಕಡೆಯಿಂದ ಹೈಡ್ರಾ ಕ್ರೇನ್ ಚಾಲಕ ಕ್ರೇನ್‌ನ್ನು ವೇಗವಾಗಿ ಹಾಗೂ ಅಜಾರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು ಪಿರ್ಯಾಧುದಾರರು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಪಾದಾಚಾರಿ ಪಿರ್ಯಾದುದಾರರ ಪರಿಚಯದ ಚಣಿಲ (75) ಆಗಿದ್ದು ಮುಡ್ರಾಡಿಯ ಪಂಚಾಯತ್‌ಲ್ಲಿ ಕೆಲಸ ಮಾಡುವ ಅವರ ಮಗ ಗಣೇಶನನ್ನು ಪಿರ್ಯಾದುದಾರರು ಕೂಗಿ ಕರೆದು ಇಬ್ಬರೂ ಸೇರಿ ನೋಡಲಾಗಿ ಚಣಿಲರವರ ಸೊಂಟ ಹಾಗೂ ಹೊಟ್ಟೆಯ ಮೇಲೆ ಕ್ರೇನ್‌ನ ಚಕ್ರ ಹರಿದು ಸ್ಥಳದಲ್ಲೆ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ:47/2025 US 281, 106 ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

