Home Art & Culture ಹಾಸ್ಯ ನಟ ರಾಜು‌ ತಾಳಿಕೋಟೆ ನಿಧನ…!!

ಹಾಸ್ಯ ನಟ ರಾಜು‌ ತಾಳಿಕೋಟೆ ನಿಧನ…!!

ಬೆಂಗಳೂರು : ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡಾ ಭಾಗವಹಿಸಿದ್ದರು.

ಉಡುಪಿ ಜಿಲ್ಲೆಯ ಮಣಿಪಾಲ‌ ಆಸ್ಪತ್ರೆಯಲ್ಲಿ ರಾಜು‌ ತಾಳಿಕೋಟೆಯವರು ಇಂದು ನಿಧನರಾದರು. ಉಡುಪಿಯಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅಭಿನಯದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು, ಆ ಚಿತ್ರದ ಶೂಟಿಂಗ್ ನಲ್ಲಿ ರಾಜು ತಾಳಿಕೋಟೆಯವರು ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ  ಹೃದಯಾಘಾತವಾಗಿದೆ. ತಕ್ಷಣವೇ ‌ಶೂಟಿಂಗ್ ತಂಡ ಆಸ್ಪತ್ರೆಗೆ ದಾಖಲಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜು ತಾಳಿಕೋಟೆಯವರು ನಿಧನ ಹೊಂದಿದ್ದಾರೆ.