Home Karavali Karnataka ವ್ಯಕ್ತಿತ್ವ ವಿಕಸನಕ್ಕೆ ಎನ್. ಎಸ್. ಎಸ್. ವಿಶೇಷ ಶಿಬಿರ ಪೂರಕ…!!

ವ್ಯಕ್ತಿತ್ವ ವಿಕಸನಕ್ಕೆ ಎನ್. ಎಸ್. ಎಸ್. ವಿಶೇಷ ಶಿಬಿರ ಪೂರಕ…!!

ಉಡುಪಿ : ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈ ಸ್ಕೂಲ್) ಉಡುಪಿ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ಎನ್‌ಎಸ್ಎಸ್ ಘಟಕ ಉಡುಪಿಯ ಕೊಡವೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಕಾಲ “ನಶಾಮುಕ್ತ ಭಾರತ” ಅಭಿಯಾನದಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.

ಗ್ರಾಮೀಣ ಭಾಗದ ಜನರೊಂದಿಗೆ ಬೆರೆತು ಶ್ರಮದಾನದ ಸಂತಸವನ್ನು ಅನುಭವಿಸಿ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದು, ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಸನ, ಪರಿಸರ ಮಾಲಿನ್ಯಕಾರಕ ಪ್ಲಾಸ್ಟಿಕ್ ಸಂಗ್ರಹಣೆ ಇತ್ಯಾದಿ ಅನೇಕ ಉದ್ದೇಶಗಳನ್ನು ಈ ಶಿಬಿರ ಹೊಂದಿತ್ತು. ಈ ಏಳು ದಿನಗಳ ಕಾಲ ನಡೆದ ವಿಶೇಷ ಶಿಬಿರದಲ್ಲಿ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀ ಶಂಕರನಾರಾಯಣ ದೇವಾಲಯದ ಆವರಣ, ಕೆರೆಕಟ್ಟೆ ಗಣಪತಿ ದೇವಾಲಯದ ಆವರಣ, ವಾಸಕಿ ನಗರದ ಪಾರ್ಕಿನಲ್ಲಿಗಿಡಗಳನ್ನು ನೆಟ್ಟು ಸ್ವಚ್ಛಗೊಳಿಸಲಾಯಿತು. ಹಾಗೂ ಕೊಡವೂರಿನ ಮತ್ತು ಲಕ್ಷ್ಮಿ ನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ಎಸೆದಿರುವ ಸುಮಾರು 10 ಕ್ವಿಂಟಲ್ ಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ತು ನಗರಸಭೆಯ ಕಸ ಸಾಗಣೆಯ ವಾಹನದ ಮೂಲಕ ರವಾನಿಸಲಾಯಿತು.

ವ್ಯಕ್ತಿಗಳಿಂದ ಶಿಬಿರಾರ್ಥಿಗಳಿಗೆ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳ ಕುರಿತು, ವಿವಿಧ ಕಾನೂನುಗಳ ಬಗ್ಗೆ ಅರಿವು, ಕಲಿಕೆಯೊಂದಿಗೆ ನಶಾಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಇತ್ಯಾದಿ ಉಪನ್ಯಾಸಗಳನ್ನು ಸಂಪನ್ಮೂಲ ಏರ್ಪಡಿಸಲಾಯಿತು. ಸತತ ಏಳು ದಿನಗಳ ಕಾಲ ನಡೆದ ವಿಶೇಷ ಶಿಬಿರ ಸೆಪ್ಟೆಂಬರ್ 27ರಂದು ಸಮಾರೋಪ ಸಮಾರಂಭ ನಡೆಯಿತು. ನಗರಸಭಾ ಸದಸ್ಯರಾದ ಕೆ. ವಿಜಯ್ ಕೊಡವೂರು ಸಮಾರೋಪ ಭಾಷಣ ಮಾಡಿ ಶಿಬಿರದ ವಿದ್ಯಾರ್ಥಿಗಳ ಶಿಸ್ತು ಮತ್ತುಶ್ರಮದಾನದ ಕಾರ್ಯವನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಲೀಲಾಬಾಯಿ ಭಟ್ ರವರು ಮಾತನಾಡಿ ಶಿಬಿರದಲ್ಲಿ ಕಲಿತ ಶಿಸ್ತು ಮತ್ತು ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಶಿಬಿರಾಧಿಕಾರಿ ಪರಮೇಶ್ವರ ಎಂ.ಮೊಗವೀರ ಏಳು ದಿನಗಳ ವಿಶೇಷ ಶಿಬಿರದ ವರದಿ ವಾಚಿಸಿದರು. ಸಹಶಿಬಿರಾಧಿಕಾರಿ ನಾಗರಾಜ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಕೊಡವೂರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಭಾತ್ ಕೋಟ್ಯಾನ್, ವಿನಯ್ ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಬಿರಾರ್ಥಿ ಸಂಗನ ಬಸು ಸ್ವಾಗತಿಸಿದರು, ಧನ್ನಿ ಸಂಗಡಿಗರು ಪ್ರಾರ್ಥನೆ ಮಾಡಿದರು, ಸಲೋನಿ ವಂದಿಸಿದರು. ಸಂತೋಷ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.