Home Crime ನಾನು ಸ್ವರ್ಗದಲ್ಲಿ ಖುಷಿಯಾಗಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ…!!

ನಾನು ಸ್ವರ್ಗದಲ್ಲಿ ಖುಷಿಯಾಗಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ…!!

ಬೆಂಗಳೂರು: 7ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸಿಕೆ ಅಚ್ಚುಕಟ್ಟುವಿನಲ್ಲಿ ನಡೆದಿದೆ.

ಗಾಂದಾ‌ರ್ ಆತ್ಮಹತ್ಯೆಗೆ ಶರಣಾದ ಬಾಲಕ. Forgive Me , ನಾನು ಮಾಡಿದ ಪಾಪ ಹಾಗೂ ತಪ್ಪನ್ನು ಕ್ಷಮಿಸಿ. ದಯವಿಟ್ಟು ಅಳಬೇಡಿ, ನಾನು ಈಗಾಗಲೇ ಸ್ವರ್ಗದಲ್ಲಿ ಇದ್ದೇನೆ. ಮನೆ ಚೆನ್ನಾಗಿ ಇರಲಿ ಅಂತ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನಂಗೊತ್ತು ನಿಮಗೆ ಕೋಪ ಬರಲು ಕಾರಣನಾಗಿದ್ದೇನೆ. ನನ್ನ ಉದ್ದೇಶ ಸಾವಾಗಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ, 14 ವರ್ಷ ಖುಷಿಯಾಗಿದ್ದೆ. ನಾನು ಸರ್ಗದಲ್ಲಿ ತುಂಬಾ ಖುಷಿಯಾಗಿದ್ದೇನೆ. ನನ್ನ ಸ್ನೇಹಿತರಿಗೆ ಎಲ್ಲರಿಗೂ ಹೇಳಿ ನಾನು ಖುಷಿಯಾಗಿದ್ದೇನೆ. ಗುಡ್ ಬಾಯ್ ಅಮ್ಮ ಎಂದು ಬಾಲಕ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.

ಬಾಲಕನ ತಂದೆ ಗಣೇಶ್ ಪ್ರಸಾದ್‌ ಮತ್ತು ತಾಯಿ ಇಬ್ಬರೂ ಕಲಾವಿದರು. ಬೆಳಗ್ಗೆ ತಂದೆ ಬಾಲಕನ ರೂಮ್‌ಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.