Home Crime ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್ : ಆರೋಪಿ ಸೆರೆ‌..‌!!

ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್ : ಆರೋಪಿ ಸೆರೆ‌..‌!!

ಬಾಗಲಕೋಟೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ್ದವನನ್ನು ಇದೀಗ ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಕಲಾದಗಿ ಪಟ್ಟಣದ ನಿವಾಸಿ ಮೊಹಮ್ಮದ್ ಅಜೀಜ್ ರೋಣ (27) ಎಂದು ಗುರುತಿಸಲಾಗಿದೆ.

ಬಾಗಲಕೋಟೆ ತಾಲೂಕಿನ ಕಲಾದಗಿ ಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಫೋಟೋ ಎಡಿಟ್ ಮಾಡಿ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಆರೋಪಿ ಮೊಹಮ್ಮದ್ ಪೋಸ್ಟ್ ಮಾಡಿದ್ದ.

ಮೊಹಮ್ಮದ್ ಅಜೀಜ್ ಪ್ರಧಾನ ಮಂತ್ರಿ ಮೋದಿ ಜೈಲಿನಲ್ಲಿ ಬಂಧಿಸಿದ ರೀತಿಯಲ್ಲಿ ಎಡಿಟ್ ಮಾಡಿದ್ದ. ಅಷ್ಟೆ ಅಲ್ಲದೇ ಓವೈಸಿ ಪೊಲೀಸ್ ಅಧಿಕಾರಿ ವೇಷದಲ್ಲಿ ಕೂತಿರುವ ರೀತಿ ಎಡಿಟ್ ಮಾಡಿದ್ದ. ಈ ಹಿನ್ನೆಲೆ ಕಲಾದಗಿ ಪೊಲೀಸರು ಆರೋಪಿ ಮೇಲೆ ಸುಮೋಟೋ ಕೇಸ್ ಹಾಕಿ ಅರೆಸ್ಟ್ ಮಾಡಿದ್ದಾರೆ.