Home Crime ಮಣಿಪಾಲ : ಮಹಿಳೆಯೊಬ್ಬರಿಗೆ ವಾಟ್ಸ್ ಆಪ್ ಲಿಂಕ್ ಮುಖಾಂತರ ಲಕ್ಷಾಂತರ ರೂಪಾಯಿ ವಂಚನೆ….!!

ಮಣಿಪಾಲ : ಮಹಿಳೆಯೊಬ್ಬರಿಗೆ ವಾಟ್ಸ್ ಆಪ್ ಲಿಂಕ್ ಮುಖಾಂತರ ಲಕ್ಷಾಂತರ ರೂಪಾಯಿ ವಂಚನೆ….!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಮಹಿಳೆಯೊಬ್ಬರ ಮೊಬೈಲ್ ನ ವಾಟ್ಸ್ ಆಪ್ ಲಿಂಕ್ ಮುಖಾಂತರ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ವಂಚನೆಗೊಳಾಗದವರು ರೇಣುಕಾ ಎಂದು ತಿಳಿಯಲಾಗಿದೆ.

ಇವರಿಗೆ ಮೊಬೈಲ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆಯಾಗಿದೆ ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 18/07/205 ರಂದು 14:19 ಗಂಟೆಗೆ ಪಿರ್ಯಾದಿದಾರರಾದ ರೇಣುಕಾ ಇವರು ಇನ್ಸ್ಟಾಗ್ರಾಂ ನಲ್ಲಿ ಕೆಲಸದ ಕುರಿತಾಗಿ ವಿಡಿಯೋವನ್ನು ನೋಡುತ್ತಿರುವಾಗ ಕೆಲಸದ ಬಗ್ಗೆ ವಿಚಾರಿಸುವಂತೆ ತಿಳಿಸಿದ್ದು ಪಿರ್ಯಾದಿದಾರರು ತಮ್ಮ ವಾಟ್ಸ್‌ ಆಪ್‌ ಮೂಲಕ Hai ಎಂದು ಕಳುಹಿಸಿದ್ದು ಆಗ ಆ ನಂಬರಿನಿಂದ ಒಂದು ಲಿಂಕ್‌ ಬಂದಿದ್ದು ಪಿರ್ಯಾದಿದಾರರು ಲಿಂಕನ್ನು ಓಪನ್‌ ಮಾಡಿದಾಗ Teligram User Name @Bharati-mayurakshi-989 ಕೊಟ್ಟು salary Code ಹಾಕಿ ಅವರಿಗೆ ಕಂಟಾಕ್ಟ್‌ ಮಾಡಿ ಎಂದು ತಿಳಿಸಿದಂತೆ ಪಿರ್ಯಾದಿದಾರರು ಹೆಸರು ವಿಳಾಸ ಹಾಗೂ ಬ್ಯಾಂಕ್‌ ವಿವರವನ್ನು ನೀಡಿದ್ದು ನಂತರ ಅವರು ಟಾಸ್ಕ್‌ ಗಳನ್ನು ನೀಡಿ ಮೊದಲಿಗೆ ಪಿರ್ಯಾದಿದಾರಿಂದ ಹಣವನ್ನು ಹಾಕಿಸಿಕೊಂಡು ಸಣ್ಣ ಮೊತ್ತದ ಹಣವನ್ನು ಮರುಪಾವತಿಸಿದ್ದು ನಂತರ ಟಾಸ್ಕ್‌ ನೀಡಿ ಒಟ್ಟು 7,63,080/- ರೂಪಾಯಿ ಹಣವನ್ನು ಪಿರ್ಯಾದಿದಾರರನ್ನು ನಂಬಿಸಿ ಹಂತಹಂತವಾಗಿ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2025 ಕಲಂ: 316(2), 318(4) 319(2) BNS ಮತ್ತು 66(C), 66(D) I.T. Act ರಂತೆ ಪ್ರಕರಣ ದಾಖಲಾಗಿರುತ್ತದೆ.