ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಗೋಡೌನ್ ನಲ್ಲಿ ಅನ್ನ ಭಾಗ್ಯ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆ ಎಂಬಲ್ಲಿರುವ ಉದಯ ಎಂಬುವವರ ಮನೆಯ ಬಳಿ ಇರುವ ಗೋಡೌನ್ ನಲ್ಲಿ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೋಟ ಪೊಲೀಸರು ದಾಸ್ತಾನು ಮಾಡಿದ ಅಕ್ಕಿಯನ್ನು ವಶಪಡಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ದಿನಾಂಕ 04/08/2025 ರಂದು ಪಿರ್ಯಾದಿದಾರರಾದ ಹೆಚ್ ಎಸ್ ಸುರೇಶ್ (48), ಕೋಣಿ ಗ್ರಾಮ ಇವರಿಗೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆ ಎಂಬಲ್ಲಿರುವ ಉದಯ ಎಂಬುವವರ ಮನೆಯ ಬಳಿ ಇರುವ ಗೋಡೌನ್ ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಕೋಟ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ರಾತ್ರಿ 08:00 ಗಂಟೆಗೆ ದಾಳಿ ನಡೆಸಿದಾಗ ಗೋಡೌನೊಳಗೆ ಬಿಳಿ ಪಾಲಿಥೀನ್ ಚೀಲದಲ್ಲಿ ಅಕ್ಕಿಯನ್ನು ತುಂಬಿದ್ದು ಕಂಡು ಬಂದಿದ್ದು ಸರಕಾರದಿಂದ ನೀಡುವ ಉಚಿತ ಪಡಿತರ ಅಕ್ಕಿಯಾಗಿದ್ದು ಅಕ್ರಮವಾಗಿ ದಾಸ್ತಾನು ಇರಿಸಿದ ಅಕ್ಕಿಯೆಂದು ದೃಢಪಟ್ಟಿರುವುದರಿಂದ ಒಟ್ಟು 8 ಕ್ವಿಂಟಾಲ್ 45 ಕೆ ಜಿ ಸಂಗ್ರಹಿಸಿ ಇಡಲಾದ ಅಕ್ಕಿ ಮತ್ತು ತೂಕ ಮಾಡುವ ಮಾಪನ -1 ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2025 ಕಲಂ:(3),(7) ಅಗತ್ಯ ವಸ್ತುಗಳ ಕಾಯ್ದೆ 1955 & 3(2) ,18(1) ಕರ್ನಾಟಕ ಸಾರ್ವಜನಿಕ ವಿತರಣ ಪದ್ದತಿ ನಿಯಂತ್ರಣ ಆದೇಶ 2016 ರಂತೆ ಪ್ರಕರಣ ದಾಖಲಾಗಿರುತ್ತದೆ.