ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ವ್ಯಕ್ತಿಯೋರ್ವ ಮನೆಯ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಗೌತಮ್ ಪ್ರಭು ಎಂಬವ ಪಟಾಕಿ ದಾಸ್ತಾನು ಮಾಡಿದ್ದಾನೆ ಎಂದು ತಿಳಿಯಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ದಿನಾಂಕ 29/10/2025 ರಂದು ತೇಜಸ್ವಿ ಟಿ.ಐ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರಿಗೆ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಶಂಕರಪುರ ಕಡೆಯಿಂದ ಮೂಡುಬೆಟ್ಟು ದೇವಸ್ಥಾನ ಕಡೆಗೆ ಹೋಗುವ ಕಾಂಕ್ರೀಟ್ ಒಳ ರಸ್ತೆಯಲ್ಲಿರುವ ಕ್ಲೇರಾ ಮೆಂಡೋನ್ಸ್ ಎಂಬುವವರ ಮನೆಯಲ್ಲಿ ಆರೋಪಿ ಗೌತಮ್ ಪ್ರಭು ಎಂಬಾತನು ಅಕ್ರಮವಾಗಿ ಸುಡುಮದ್ದು (ಪಟಾಕಿ) ದಾಸ್ತಾನು ಮಾಡಿಟ್ಟಿರುತ್ತಾರೆ ಎಂಬ ಮಾಹಿತಿಯಂತೆ ದಾಳಿ ನಡೆಸಿ, ಒಟ್ಟು ಅಂದಾಜು ಎರಡು ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗೆ ಸೇರಿದ ವಿವಿಧ ಸುಡುಮದ್ದು(ಪಟಾಕಿ)ಗಳನ್ನು ಸ್ವಾಧೀನಪಡಸಿಕೊಳ್ಳಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2025 ಕಲಂ: 9B(1) (b) Explosive Act-1884 ಮತ್ತು ಕಲಂ: 287, 288 BNS ರಂತೆ ಪ್ರಕರಣ ದಾಖಲಾಗಿರುತ್ತದೆ.



