ಶಿರ್ವ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಗ್ರಾಮದ ಮಟ್ಟಾರು ಪೋಸ್ಟ್‌ನ ಕಾಫಿಕಾಡು ಪ್ರದೇಶದಲ್ಲಿ ನಡೆದಿದೆ.
ಪ್ರಕಾಶ್ ಆಚಾರ್ಯ (38) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮದುವೆಯಾಗದಿರುವ ಪ್ರಕಾಶ್ ಅವರು ಕಳೆದ ಸುಮಾರು 20 ವರ್ಷಗಳಿಂದ ಮದ್ಯಪಾನ ಮಾಡುವ ಚಟ ಹೊಂದಿದ್ದು, ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ದರು. ಈ ಹಿನ್ನೆಲೆ ಅವರಿಗೆ ಬಾಳಿಗ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ದಿನಾಂಕ 12 ಏಪ್ರಿಲ್ 2026 ರಂದು ಮನೆಯಲ್ಲಿ ಗಲಾಟೆ ಮಾಡಿದ್ದ ಅವರು, ತಾಯಿಯ ಬಳಿ ತಾನು ಸಾಯುವುದಾಗಿ ಪದೇಪದೇ ಹೇಳಿಕೊಂಡಿದ್ದರು. ಇದಾದ ನಂತರ, ಏಪ್ರಿಲ್ 13ರಂದು ಬೆಳಗಿನ ಜಾವ 3.15 ರಿಂದ 6.30 ಗಂಟೆಯೊಳಗೆ, ಮನೆಯ ಸಮೀಪದ ಕುಂಟಲ ಮರದ ಕೊಂಬೆಗೆ ಲುಂಗಿ ಕಟ್ಟಿ, ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ..





