Home Crime ಕುತ್ತಿಗೆಗೆ ನೈಲಾನ್ ಹಗ್ಗ ಕಟ್ಟಿ ಮಹಿಳೆಯೊಬ್ಬರು ಆತ್ಮಹತ್ಯೆ…!!

ಕುತ್ತಿಗೆಗೆ ನೈಲಾನ್ ಹಗ್ಗ ಕಟ್ಟಿ ಮಹಿಳೆಯೊಬ್ಬರು ಆತ್ಮಹತ್ಯೆ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮನೆಯೊಂದರಲ್ಲಿ ಗಂಡ-ಹೆಂಡತಿ ಮದ್ಯ ಕುಡಿದು ಜಗಳ ಮಾಡಿ ನಂತರ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಲಕ್ಷ್ಮೀ ಎಂದು ತಿಳಿಯಲಾಗಿದೆ.

ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾಧಿದಾರ ರಕ್ಷೀತಾ (20) ತಂದೆ:ಗೋಪಾಲ್‌ ಮರಾಠಿ ವಾಸ:ನರ್‌ ಮನೆ ಒಣಕೊಡ್ಲು ಗಂಗಾನಾಡು ಬೈಂದೂರು ಗ್ರಾಮ ಇವರ ತಾಯಿಯಾದ ಲಕ್ಷ್ಮೀ (46) ರವರು ಬೈಂದೂರು ಒಣಕೋಡು ಗಂಗನಾಡು ಎಂಬಲ್ಲಿ ತನ್ನಗಂಡ ಗೋಪಾಲ್‌ ರವರರೊಂದಿಗೆ ವಾಸವಾಗಿದ್ದು ತಂದೆ ತಾಯಿ ಇಬ್ಬರು ಮದ್ಯ ಕುಡಿಯುವ ಅಬ್ಯಾಸದವರಾಗಿದ್ದು ಆಗಾಗ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದು ದಿನಾಂಕ 12-07-2026 ರಂದು ಮನೆಯಲ್ಲಿ ಜಗಳ ಮಾಡಿಕೊಂಡಿದ್ದು ಫಿರ್ಯಾಧಿದಾರರು ಮದ್ಯಾಹ್ನ 01:00 ಗಂಟೆಗೆ ಕುಂದಾಪುರ ದಿಂದ ಮನೆಗೆ ಬಂದು ಅವರಿಬ್ಬರಿಗೂ ಜಗಳ ಮಾಡದಂತೆ ಬುದ್ದಿವಾದ ಹೇಳಿ ಸಂಜೆ 4 ಗಂಟೆಗೆ ವಾಪಸ್ಸು ಕುಂದಾಪುರಕ್ಕೆ ಹೋಗಿದ್ದು ಈ ದಿನ ದಿನಾಂಕ 13-07-2026 ರಂದು ಬೆಳಿಗ್ಗೆ 7:30 ಗಂಟೆಗೆ ಫಿರ್ಯಾಧಿದಾರರ ಚಿಕ್ಕಮ್ಮ ರೇವತಿಯವರು ಫಿರ್ಯಾಧಿದಾರರಿಗೆ ಕರೆ ಮಾಡಿ ಮನೆಗೆ ಬೇಗ ಬರುವಂತೆ ತಿಳಿಸಿದ್ದು ಫಿರ್ಯಾಧಿದಾರರು ವಾಪಸ್ಸು ಮನೆಗೆ ಬಂದು ನೋಡುವಾಗ ತಾಯಿ ಲಕ್ಷ್ಮೀ ರವರು ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೈಲಾನ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್‌.ಕ್ರಮಾಂಕ: 37/2026 ಕಲಂ 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.