Home Crime ಅಸ್ಸಾಂ ಮೂಲದ ಯುವಕ ನೇಣು ಬಿಗಿದು ಆತ್ಮಹತ್ಯೆ…!!

ಅಸ್ಸಾಂ ಮೂಲದ ಯುವಕ ನೇಣು ಬಿಗಿದು ಆತ್ಮಹತ್ಯೆ…!!

ಕೋಟ: ಅಸ್ಸಾಂ ಮೂಲದ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಜಿತ್ ಬೊರೊ (25) ನೀಡಿದ ಮಾಹಿತಿಯಂತೆ, ಅಸ್ಸಾಂ ರಾಜ್ಯದ ಭಕ್ಸಾ ಜಿಲ್ಲೆಯ ತಾಮುಲ್ಪುರ್‌ ಭಗಲಾಮರಿ ನಿವಾಸಿಯಾಗಿರುವ ಅಲೋಂಗಬರ್ ಬೊರೊ ಅವರು ಜೂನ್ 1ರಂದು ಬೆಳಿಗ್ಗೆ ಸಹೋದ್ಯೋಗಿಯೊಂದಿಗೆ ತಿಂಡಿ ಸೇವಿಸಿದ ಬಳಿಕ ಕೆಲಸಕ್ಕೆ ತೆರಳದೆ ರಜೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ನಂತರ ಅವರು ಹೊರಗೆ ಹೋಗಿದ್ದು, ಬಹಳ ಸಮಯವಾದರೂ ವಾಪಸ್ಸು ಬಂದಿರಲಿಲ್ಲ.

ಅಲೋಂಗಬರ್ ಬೊರೊ ಅವರ ಪತ್ನಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು, ಒಬ್ಬ ಮಗನ ಜವಾಬ್ದಾರಿ ಅವರ ಮೇಲಿದೆ. ಈ ವಿಚಾರವಾಗಿ ಅವರು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದು, “ನನಗೆ ಯಾರೂ ಇಲ್ಲ” ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಮಾನಸಿಕ ಖಿನ್ನತೆಯಲ್ಲಿದ್ದು ಮದ್ಯ ಸೇವಿಸುವ ಅಭ್ಯಾಸವೂ ಹೊಂದಿದ್ದರು ಎಂದು ತಿಳಿದುಬಂದಿದೆ.

ಅವರನ್ನು ಹುಡುಕುತ್ತಾ ಕಾರ್ಖಾನೆಯ ಪಶ್ಚಿಮ ದಿಕ್ಕಿನ ಹಾಡಿಯ ಕಡೆಗೆ ತೆರಳಿದ ವೇಳೆ, ಬೆಳಿಗ್ಗೆ ಸುಮಾರು 10 ಗಂಟೆಗೆ ಕಾಡು ಮರದ ಕೊಂಬೆಗೆ ಬಾತ್ ಟವೆಲ್ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡು,  ತನಿಖೆ ಕೈಗೊಳ್ಳಲಾಗಿದೆ.