Home Crime ಗೋವಾದಲ್ಲಿ ಮಲ್ಪೆಯ ಯುವಕನ ಅನುಮಾನಾಸ್ಪದ ಸಾವು…!!

ಗೋವಾದಲ್ಲಿ ಮಲ್ಪೆಯ ಯುವಕನ ಅನುಮಾನಾಸ್ಪದ ಸಾವು…!!

ಉಡುಪಿ : ಗೋವಾದ ಕ್ಯಾಲಂಗುಟ್ ಬೀಚ್ ನಲ್ಲಿ ಮಲ್ಪೆಯ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಮೃತಪಟ್ಟ  ಯುವಕ ಸಂದೀಪ್ ಸಾಲ್ಯಾನ್ ಎಂದು ತಿಳಿಯಲಾಗಿದೆ.

ಸಂದೀಪ್ ಎರಡು ದಿನದ ಹಿಂದೆ ಸ್ನೇಹಿತರ ಜೊತೆ ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದ. ಜೂ. 30 ರಂದು ಸಂಜೆ ಆತ ಲಾಡ್ಜ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ.

ಈ ಸಾವು ಹೃದಯಾಘಾತದಿಂದ ಆಗಿದೆಯೋ ಅಥವಾ ಕೊಲೆಯೋ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ. ಸಂದೀಪ್ ಜೊತೆ ಒಂದು ಯುವತಿ ಇದ್ದಳು, ಸಾವಿನ ನಂತರ ಆಕೆ ಪರಾರಿಯಾಗಿದ್ದಾಳೆ ಎಂದು ಮಾಹಿತಿ ತಿಳಿದು ಬಂದಿದೆ.

ಸಂದೀಪ್ ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೊತೆಗೆ ಕೆಲಸ ಮಾಡುತ್ತಿದ್ದ.ಇತ್ತೀಚೆಗೆ ಮಲ್ಪೆ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ನಡೆಸುತ್ತಿದ್ದ ಎನ್ನಲಾಗಿದೆ.

ಸಂದೀಪ್ ಬಹಳ ಸ್ನೇಹ ಜೀವಿಯಾಗಿದ್ದ.ಮತ್ತು ಸಮಾಜ ಸೇವೆಯ ಕೆಲಸಗಳನ್ನು ಮಾಡುತ್ತಿದ್ದ.ಸಂದೀಪ್ ಸಾವಿನ ಸುದ್ದಿ ತಿಳಿದು ಮಲ್ಪೆಯ ಸ್ನೇಹಿತರು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೂ ಅನುಮಾನಾಸ್ಪದ ಸಾವು ಸಂಶಯ ಪಟ್ಟಿದ್ದಾರೆ.