Home Latest ಪಠ್ಯದ ಜೊತೆಗೆ ಸೇವೆಯೂ ಅಗತ್ಯ: ಜ್ಞಾನಗಂಗಾ ಕಾಲೇಜಿನ ಎನ್‌ಎಸ್‌ಎಸ್ ಉದ್ಘಾಟನೆಯಲ್ಲಿ ಸುದರ್ಶನ ಶೇರಿಗಾರ್ ಕರೆ..!!

ಪಠ್ಯದ ಜೊತೆಗೆ ಸೇವೆಯೂ ಅಗತ್ಯ: ಜ್ಞಾನಗಂಗಾ ಕಾಲೇಜಿನ ಎನ್‌ಎಸ್‌ಎಸ್ ಉದ್ಘಾಟನೆಯಲ್ಲಿ ಸುದರ್ಶನ ಶೇರಿಗಾರ್ ಕರೆ..!!

ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ.( ಜೆ.ಐ.ಇ.ಸಿ.ಕೋ ಆಪರೇಟಿಂಗ್ ಸೊಸೈಟಿ ಉಡುಪಿ ಇದರ ಅಂಗಸಂಸ್ಥೆ) ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಸೇವಾ ಯೋಜನೆಯ ಸುಂದರ ಹಾಡಿನ ಜೊತೆ ಜೊತೆಯಲ್ಲಿ ಉದ್ಘಾಟನಾ ಕಾರ್ಯ ದೀಪ ಬೆಳಗಿಸಿವುದರ ಮೂಲಕ ಜರುಗಿತು.
ಉದ್ಘಾಟಕರಾಗಿ ಆಗಮಿಸಿದ
ಶ್ರೀ ಸುದರ್ಶನ ಶೇರಿಗಾರ್ , ಉಪಾಧ್ಯಕ್ಷ, ಹಣಕಾಸು ವಿಭಾಗ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಯಾದವ ದೇವಾಡಿಗ ಅಧ್ಯಕ್ಷರು ಜ್ಞಾನಗಂಗಾ ಪದವಿ ಪೂರ್ವ ಕಾಲೇಜು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಯುತ ಎಂ ಗೋಪಿಕೃಷ್ಣರಾವ್ ವಕೀಲರು ಹಾಗೂ ಸ್ಥಾಪಕಾಧ್ಯಕ್ಷರು ಜ್ಞಾನಗಂಗಾ ಪದವಿ ಪೂರ್ವ ಕಾಲೇಜು, ಶ್ರೀ ಪ್ರಭಾಕರ್ ಕೆ.ಎಸ್ ಪ್ರಭಾರ ಕಾರ್ಯದರ್ಶಿ ಜನರಲ್ ಇನ್ಸೂರೆನ್ಸ್ ಎಂಪ್ಲಾಯಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ. ಇವರೆಲ್ಲರೂ ಸೇರಿ ಗಿಡಕ್ಕೆ ನೀರೆರೆಯುವುದರೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯ ಭಿತ್ತಿ ಪತ್ರವನ್ನು ಕೂಡಾ ಉದ್ಘಾಟನೆ ಮಾಡಿದರು.

ಉದ್ಘಾಟಕರಾದ ಶ್ರೀ ಸುದರ್ಶನ್ ಶೇರಿಗಾರ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಹಕಾರ, ಸಹಬಾಳ್ವೆ, ಏಕತೆ, ಸಮಾನಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅದರೊಂದಿಗೆ ಅವರ ವಿದ್ಯಾರ್ಥಿ ಜೀವನದ ಎನ್ ಎಸ್ ಎಸ್ ಶಿಬಿರದ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವ ಶ್ರೀ ಯಾದವ ದೇವಾಡಿಗ ಅಧ್ಯಕ್ಷರು ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಇವರು ಸೇವಾ ಮನೋಭಾವನೆಯ ಅರ್ಥ ಅರಿತುಕೊಳ್ಳಬೇಕಾದರೆ ನಾವು ಎನ್ ಎಸ್ ಎಸ್ ನಲ್ಲಿ ಭಾಗವಹಿಸಬೇಕು ಹಾಗಿದಲ್ಲಿ ಮಾತ್ರಾ ಸೇವೆಯ ಮನೋಭಾವ ಮನದಲ್ಲಿ ಬರುತ್ತದೆ ಎಂದು ಮಕ್ಕಳಿಗೆ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಯುತ ಎಂ ಗೋಪಿಕೃಷ್ಣರಾವ್ ವಕೀಲರು ಹಾಗೂ ಸ್ಥಾಪಕಾಧ್ಯಕ್ಷರು ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಇವರು ವಿದ್ಯಾಭ್ಯಾಸದೊಂದಿಗೆ ಹವ್ಯಾಸವನ್ನು ಬೆಳೆಸಿಕೊಂಡು ಒಂಟಿತನದಿಂದ ದೂರವಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಶ್ರೀ ಪ್ರಭಾಕರ್ ಕೆ.ಎಸ್ ಪ್ರಭಾರ ಕಾರ್ಯದರ್ಶಿ ಜನರಲ್ ಇನ್ಸೂರೆನ್ಸ್ ಎಂಪ್ಲಾಯಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ. ಇವರು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್ ನಾಯ್ಕ್ ಇವರು ಯುವಶಕ್ತಿ ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾದಿಕಾರಿಗಳಾದ ಭಾಸ್ಕರ್ ಆಚಾರ್ಯ ಇವರು
ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಗತ್ಯ ಹಾಗೂ ಅದರ ಮಾಹಿತಿಯನ್ನು ಪ್ರಾಸ್ತಾವಿಕ ಮಾತಿನಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಅವರ ಕರ್ತವ್ಯ ತಿಳಿಸುವ ಪ್ರತಿಜ್ಞಾ ವಿಧಿ ಕಾರ್ಯವನ್ನು ನಡೆಸಿಕೊಟ್ಟರು.

2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿಯಾದ ತ್ರಿಶ, ನಾಯಕನಾದ ಆರ್ಯನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿ ತ್ರಿಶ ಇವರು ಸೇರಿದಂತಹ ಸರ್ವರಿಗೂ ಪ್ರೀತಿ ಪೂರ್ವಕವಾಗಿ ಧನ್ಯವಾದ ಸಲ್ಲಿಸಿದರು.

ಪ್ರಥಮ ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿಯರು ದೇವತಾ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು.

ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರತೀಕ್ಷಾ ಕಾರ್ಯಕ್ರಮದ ನಿರೂಪಣೆ ಮಾಡಿದರು.

ವರದಿ ಅನಿಲ್  ಮೂಡುಬೆಳ್ಳೆ