Home Latest ಉಡುಪಿಯಲ್ಲಿ ಶಂಕರಾಚಾರ್ಯ ನಿಂದನೆಗೆ ಆಕ್ರೋಶ…!!

ಉಡುಪಿಯಲ್ಲಿ ಶಂಕರಾಚಾರ್ಯ ನಿಂದನೆಗೆ ಆಕ್ರೋಶ…!!

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದ ಏಕಾದಶಿ ಪುಣ್ಯದಿನದಂದು ನಡೆದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಮೂಲಕ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ತಪ್ಪಿತಸ್ಥರು ತಕ್ಷಣ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

​ಸರ್ವರಿಗೂ ಸಮಭಾವ ಬೋಧಿಸಿದ ಕೃಷ್ಣ ಪರಮಾತ್ಮನ ಗೀತೆಯ ನಿಜವಾದ ಸಾರ ಈ ಕೆಲವು ಕೃಷ್ಣ ಭಕ್ತರಿಗೆ ಇನ್ನೂ ಅರ್ಥವಾಗಿಲ್ಲ ಎಂಬುದು ಮಾತ್ರ ತೀವ್ರ ವಿಷಾದನೀಯ.