Home Latest ಕಾಪು ಪುರಸಭೆ ವ್ಯಾಪ್ತಿಯ 50 ಲಕ್ಷ ರೂಪಾಯಿ ಅನುದಾನದ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಕಾಪು ಪುರಸಭೆ ವ್ಯಾಪ್ತಿಯ 50 ಲಕ್ಷ ರೂಪಾಯಿ ಅನುದಾನದ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಕಾಪು ಪುರಸಭಾ ವ್ಯಾಪ್ತಿಯ ವಿವಿಧ ವಾರ್ಡಿನ ಅಲ್ಪಸಂಖ್ಯಾತರ ಕಾಲೋನಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 09-04-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

 

ಕಾಪು ಪುರಸಭಾ ವ್ಯಾಪ್ತಿಯ ಗುಜ್ಜಿ ವಾರ್ಡಿನ ಮುಕ್ತರ್ ಸಾಹೇಬರ ಮನೆಯಿಂದ ಇಕ್ಬಾಲ್ ಸಾಹೇಬರ ಮನೆ ತನಕ ರಸ್ತೆ ಅಭಿವೃದ್ಧಿ – 40 ಲಕ್ಷ, ದುಗ್ಗನ್ ತೋಟ ಅಭಿಮಾನ್ ಗೋಲ್ಡ್ ಆಜಬ್ಬ ರವರ ಮನೆಯಿಂದ ಹಮೀದ್ ಅವರ ಮನೆ ವರೆಗೆ ರಸ್ತೆ ಅಭಿವೃದ್ಧಿಗೆ – 5 ಲಕ್ಷ, ತೊಟ್ಟಂ ವಾರ್ಡಿನ ಮುಸ್ತಾಕ್ ರವರ ಮನೆಯಿಂದ ಹಮೀದ್ ರವರ ಮನೆ ವರೆಗೆ ರಸ್ತೆ ಅಭಿವೃದ್ಧಿಗೆ – 5 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.*

 

ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಮೋಹಿನಿ ಶೆಟ್ಟಿ, ಉಪಾಧ್ಯಕ್ಷರಾದ ಸರೀತಾ ಶಿವಾನಂದ, ಪುರಸಭೆಯ ಸದಸ್ಯರಾದ ರತ್ನಾಕರ ಶೆಟ್ಟಿ, ಶೈಲೇಶ್ ಅಮೀನ್, ಹರೀಣಾಕ್ಷಿ ದೇವಾಡಿಗ, ಉಮೇಶ್ ಕರ್ಕೇರ, ಸತೀಶ್ಚಂದ್ರ, ಆಸೀಫ್, ನೂರೂದ್ದೀನ್, ವಹೀದಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.