ಮಂಗಳೂರು : ಎಡಪದವು ಹನುಮಾನ್ ಮಂದಿರದ ಬಳಿ ನಾಲ್ಕು ಜನ ದುಷ್ಕರ್ಮಿಗಳು ನಮ್ಮ ಕಾರ್ಯಕರ್ತನಾದ ಅಖಿಲೇಶ್ ಎಂಬವರ ಮೇಲೆ ತಲವಾರಿನಿಂದ ದಾಳಿ ನಡೆಸಿ ಕೊಲೆ ಯತ್ನಕ್ಕೆ ಪ್ರಯತ್ನ ಪಟ್ಟಿರುವುದನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.
ಒಂದು ಬೈಕ್ ನಲ್ಲಿ ನಾಲ್ಕು ದುಷ್ಕರ್ಮಿಗಳು ಬಂದು ತಲವಾರಿಂದ ಹಲ್ಲೆ ನಡೆಸಿರುವುದು ಬಹಳ ಗಂಭೀರವಾದಂತಹ ಘಟನೆಯಾಗಿದ್ದು ಅಮಾಯಕ ಯುವಕರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ಅಗ್ರಹ ಮಾಡುತ್ತೇವೆ. ಎಂದು ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕರಾದ ನವೀನ್ ಮೂಡುಶೆಡ್ಡೆ ಪತ್ರಿಕಾ ಪ್ರಕಟನೆಯ ಮೂಲಕ ಬಜರಂಗದಳ ಜಿಲ್ಲಾ ಸಂಯೋಜಕರಾದ ನವೀನ್ ಮೂಡುಶೆಡ್ಡೆ ತಿಳಿಸಿದ್ದಾರೆ.



