Home Crime ಎಎಸ್‌ಐ ಐತಪ್ಪ ಅವರ ಮೇಲೆ ಕೊಲೆ ಯತ್ನ ಪ್ರಕರಣ : ಕ್ರಿಮಿನಲ್ ಸಮೀರ್ ಗೆ ರೆಡ್...

ಎಎಸ್‌ಐ ಐತಪ್ಪ ಅವರ ಮೇಲೆ ಕೊಲೆ ಯತ್ನ ಪ್ರಕರಣ : ಕ್ರಿಮಿನಲ್ ಸಮೀರ್ ಗೆ ರೆಡ್ ಕಾರ್ನರ್ ನೋಟಿಸ್…!

ಮಂಗಳೂರು : ಎಎಸ್‌ಐ ಐತಪ್ಪ ಅವರ ಮೇಲೆ ಕೊಲೆ ಯತ್ನ (307) ನಡೆಸಿ ವಿದೇಶಕ್ಕೆ ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ (Red corner notice) ಜಾರಿಗೊಳಿಸಲಾಗಿದೆ.

ಈತ ಕೇವಲ ಈ ಒಂದು ಪ್ರಕರಣ ಮಾತ್ರವಲ್ಲದೆ, ಒಂದು ಸಾಮೂಹಿಕ ಅತ್ಯಾಚಾರ ಹಾಗೂ ಏಳು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು 14 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಇವುಗಳಲ್ಲಿ ಹೆಚ್ಚಿನವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿವೆ‌ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈತ ವಿದೇಶದಲ್ಲಿ ಎಲ್ಲಿದ್ದಾನೆ ಎಂಬ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ತಕ್ಷಣ ಹಂಚಿಕೊಳ್ಳಿ. ಆತನನ್ನು ಅಲ್ಲಿಯೇ ವಶಕ್ಕೆ ಪಡೆಯಲಾಗುವುದು. ಅಷ್ಟೇ ಅಲ್ಲದೆ, ಸಂಬಂಧಿತ ದೇಶದ ಕಾನೂನು ಹಾಗೂ ಭಾರತದ ಕಾನೂನು ಹೀಗೆ ಎರಡೂ ಕಡೆ ಆತ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.