Home Crime ಮಲ್ಪೆ : ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ…!!

ಮಲ್ಪೆ : ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಕಾಲೇಜು‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಕೆಳಾರ್ಕಳಬೆಟ್ಟು ನಿವಾಸಿ ಸ್ವಸ್ತಿಕ್ ಎಂದು ತಿಳಿದು ಬಂದಿದೆ.

ಮಲ್ಪೆ ಪೊಲೀಸ್ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಜಯಂತಿ ಎಸ್‌ (42) ಕೆಳಾರ್ಕಳಬೆಟ್ಟು ಗ್ರಾಮ ಇವರ ಮಗ ಸ್ವಸ್ತಿಕ್‌ (16) ಈತನು ಉಡುಪಿಯ ಜ್ಞಾನ ಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಈ ದಿ ಮನೆಯಲ್ಲಿಯೆ ಇದ್ದು ಪಿರ್ಯಾದಿದಾರರು ದಿನಾಂಕ 27/07/2025 ರಂದು ಬೆಳಿಗ್ಗೆ 11:30 ಗಂಟೆಗೆ ತನ್ನ ಮಗಳ ಮೆಡಿಕಲ್‌ ಸರ್ಟಿಫಿಕಟ್ ತರಲು ನೇಜಾರಿಗೆ ಹೋಗಿ ವಾಪಾಸ್ಸು ಮನೆಗೆ 12:00 ಗಂಟೆಗೆ ಬಂದಾಗ ಮನೆಯ ಎದುರು ಬಾಗಿಲು ತೆರೆದಿದ್ದು ಪಿರ್ಯಾದಿದಾರರ ಮಗ ಮನೆಯ ಹಾಲ್‌ ನ ಉತ್ತರ ಬದಿಯ ಕಿಟಕಿಗೆ ನೇಣು ಹಾಕಿಕೊಂಡು ಸೋಫಾದ ಮೇಲೆ ಒರಗಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಕೂಡಲೆ ಸ್ವಸ್ತಿಕ್‌ ನ ಕುತ್ತಿಗೆಯಲ್ಲಿದ್ದ ಬೆಲ್ಟ್‌ ಅನ್ನು ಕಟ್‌ ಮಾಡಿ ನೆರೆಮನೆಯವರ ಸಹಾಯದಿಂದ ಕಾರಿನಲ್ಲಿ ಗೆರೊಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರ ಸಲಹೆ ಮೇರೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸ್ವಸ್ತಿಕ್‌ ಈತನು ಈಗಾಗಲೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಮಗ ದಿನಾಂಕ 27/07/2025 ರಂದು ಬೆಳಿಗ್ಗೆ 11:30 ಗಂಟೆಯಿಂದ 01:00 ಗಂಟೆಯ ಮದ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಮನೆಯಲ್ಲಿನ ಕಿಟಕಿಗೆ ಬೆಲ್ಟ್‌ ಕಟ್ಟಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದಾಗಿದೆ.

ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ಕ್ರಮಾಂಕ 43/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.