Home Karavali Karnataka ಬ್ರಹ್ಮಾವರ : ಸೆ.4ರಂದು ಬ್ರಹ್ಮಾವರ ಬಂದ್’ಗೆ ನಿರ್ಧಾರ…!!

ಬ್ರಹ್ಮಾವರ : ಸೆ.4ರಂದು ಬ್ರಹ್ಮಾವರ ಬಂದ್’ಗೆ ನಿರ್ಧಾರ…!!

ಬ್ರಹ್ಮಾವರ : ಇಲ್ಲಿನ ಮಹೇಶ್ ಆಸ್ಪತ್ರೆ ಬಳಿ ಸರ್ವಿಸ್ ರಸ್ತೆಯ ಮಣ್ಣು ಅಗೆದು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಕಾಡುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸೆ.4ರಂದು ಬ್ರಹ್ಮಾವರ ಬಂದ್’ಗೆ ಸಮಿತಿ ನಿರ್ಧರಿಸಿದೆ.

ಅಂದು 8 ಗ್ರಾಮದ ಜನರನ್ನು ಹಾಗೂ ಸಂಘ ಸಂಸ್ಥೆಯವರನ್ನು ಸೇರಿಸಿಕೊಂಡು ಫಾರ್ಚ್ಯೂನ್ ಪ್ಲಾಜಾ ಹೋಟೆಲ್ ನಿಂದ ಧರ್ಮಾವರಮ್ ಆಡಿಟೋರಿಯಮ್ ವರೆಗೆ ಸರ್ವಿಸ್ ರಸ್ತೆ ನಿರ್ಮಿಸಲಿದ್ದೇವೆ. ಅದಕ್ಕೆ ಬೇಕಾದ ಜೆಸಿಬಿ, ಟಿಪ್ಪರ್’ಗಳನ್ನು ಎನ್.ಎಚ್.ಎ.ಐ.ಯವರಿಂದ ಜಿಲ್ಲಾಧಿಕಾರಿ ಕೊಡಿಸಬೇಕು ಎಂದರು.

ಬ್ರಹ್ಮಾವರದಲ್ಲಿ ಮಾಬುಕಳದಿಂದ ಭದ್ರಗಿರಿ ವರೆಗೆ ಎರಡೂ ಕಡೆಗಳಲ್ಲಿ ತುರ್ತಾಗಿ ಸರ್ವಿಸ್ ರಸ್ತೆ ನಿರ್ಮಿಸಬೇಕು. ಬ್ರಹ್ಮಾವರದಲ್ಲಿ 7 ಪಿಲ್ಲರ್’ನ ಫ್ಲೈಓವರ್ ಮಾಡಬೇಕು ಎಂಬಿತ್ಯಾದಿ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಬಿ.ಭುಜಂಗ ಶೆಟ್ಟಿ, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಮೇಶ ನಾಯ್ಕ, ರಿಕ್ಷಾ ಚಾಲಕ ಮಾಲೀಕರ ಗೌರವ ಅಧ್ಯಕ್ಷ ರಾಜು ಪೂಜಾರಿ, ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಸ್ಎಂಎಸ್ ಸಂಸ್ಥೆಯ ಆಲ್ವಾರಿಸ್ ಡಿ’ಸಿಲ್ವ, ದಯಾನಂದ ಶೆಟ್ಟಿ ಹಾರಾಡಿ, ಪ್ರತೀತ್ ಹೆಗ್ಡೆ, ಟೆಂಪೋ ಮಾಲೀಕರ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ರಾಜರಾಮ್ ಶೆಟ್ಟಿ ಆಶ್ರಯ, ಬ್ರಹ್ಮಾವರ ಸ್ಪೋ ಕ್ಲಬ್‌ನ ಚಂದ್ರಶೇಖರ ಹೆಗ್ಡೆ ಉಪಸ್ಥಿತರಿದ್ದರು.