Home Karavali Karnataka ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇವರ ವತಿಯಿಂದ ಸುನೀತಾ ಪೂಜಾರಿ ಅವರಿಗೆ ಮನೆ...

ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇವರ ವತಿಯಿಂದ ಸುನೀತಾ ಪೂಜಾರಿ ಅವರಿಗೆ ಮನೆ ಹಸ್ತಾಂತರ….!!

ಮಂಗಳೂರು : ಕಳೆದ ಹಲವು ವರ್ಷಗಳಿಂದ ದಿವಂಗತ ಮಂಜುನಾಥ್ ಮಂಗಳೂರು ಅವರ ಸ್ಮರಣಾರ್ಥವಾಗಿ ಹುಟ್ಟಿಕೊಂಡ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಅದೆಷ್ಟೋ ಬಡ ಹಿಂದೂ ಕುಟುಂಬದ ಕಷ್ಟಕ್ಕೆ ಸ್ಪಂದಿಸುತ್ತಾ ಮಂಗಳೂರಿಗೆ ಹೆಮ್ಮೆಯ ಸಂಘಟನೆ ಎಂದು ಮಾದರಿಯಾಗಿದೆ.

ಈ ವರ್ಷ ಈ ಸಂಸ್ಥೆ ಅದಕ್ಕಿಂತ ಮಿಗಿಲಾದ ಹೆಜ್ಜೆಯೊಂದನ್ನು ಇಟ್ಟಿದ್ದು, ಮಂಗಳೂರು ಪಡೀಲ್ ನಿವಾಸಿ ಸುನೀತಾ ಪೂಜಾರಿ ಎಂಬವರ ಕಷ್ಟವನ್ನರಿತು ಅವರಿದ್ದ ಮನೆ ಬಿದ್ದು ಹೋಗುವ ಸ್ಥಿತಿಯಲ್ಲಿ ಇದ್ದುದನ್ನು ಕಂಡು, ಅವರಿಗೆ ಹೊಸದಾಗಿ ಮನೆ ಕಟ್ಟಿ ಕೊಡುವ ಭರವಸೆ ನೀಡಿದ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ, ನವೆಂಬರ್ 27 ರಂದು ಮನೆಯ ಕೆಲಸ ಶುರು ಹಿಡಿದು ಇಂದಿಗೆ ಕೇವಲ 6 ತಿಂಗಳಲ್ಲೇ ಮನೆಯ ಕೆಲಸ ಸಂಪೂರ್ಣಗೊಳಿಸಿ ಇಂದು ಗೃಹಪ್ರವೇಶ ನಡೆಸಿ, ಸುನೀತಾ ಪೂಜಾರಿ ಅವರಿಗೆ ಮನೆ ಹಸ್ತಾಂತರಿಸಿದೆ.

ಹಿಂದೂ ಸಮಾಜದ ಅಚ್ ,ಜ ಮಾಣಿಕ್ಯ ದಿವಂಗತ ಮಂಜುನಾಥ್ ಮಂಗಳೂರು ಸ್ಮರಣಾರ್ಥವಾಗಿ ಶ್ರೀಯುತ ಮನೋಜ್ ಕೋಡಿಕೆರೆ ನಾಯಕತ್ವದಲ್ಲಿ ಹುಟ್ಟಿಕೊಂಡ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಬಡ ಕುಟುಂಬದ ಸಹಾಯಕ್ಕೆ ನಾವಿದ್ದೇವೆ ಎಂದು ಮುಂಚೂಣಿಯಲ್ಲಿರುತ್ತ, ಈಗ ಒಂದು ಅಶಕ್ತ ಕುಟುಂಬಕ್ಕೇ ಮನೆ ನಿರ್ಮಾಣ ಮಾಡಿ, ಎಲ್ಲಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.