Home Crime ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ…!!

ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಸಮೀಪ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆ ಪವಿತ್ರ ಎಂದು ತಿಳಿಯಲಾಗಿದೆ.

ಗಂಡ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಪವಿತ್ರಳಾ ತಾಯಿ ಸುಮತಿ ಆರೋಪಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ಪಿರ್ಯಾದಿದಾರರಾದ ಸುಮತಿ (60) ವಾರಂಬಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಮಗಳು ಪವಿತ್ರ (37) ಇವರನ್ನು 2016 ರಲ್ಲಿ ಉಪ್ಪಿನಕುದ್ರು ವಾಸಿ ಶೇಷಗಿರಿ ರವರ ಮಗ ಶ್ರೀಧರ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಎರಡುವರೆ ವರ್ಷದ ಶಿವನ್ಯ ಎಂಬ ಹೆಣ್ಣು ಮಗು ಇರುತ್ತದೆ. ಸುಮಾರು 3 ವರ್ಷಗಳ ಹಿಂದೆ ಪಿರ್ಯಾದಿದಾರರ ಮಗಳು ಪವಿತ್ರ ತನ್ನ ಗಂಡ ಹಾಗೂ ಮಗುವಿನೊಂದಿಗೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಕರುಣಾಕರ ರವರ ಬಾಬ್ತು ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು ದಿನಾಂಕ 26/07/2025 ರಂದು ಪಿರ್ಯಾದಿದಾರರಿಗೆ ಕರೆ ಮಾಡಿ ಬೆಳ್ತಿಗೆ ಅಕ್ಕಿ ತುಪ್ಪ ಸ್ಯಾವಿಗೆ ಅಚ್ಚು ಬೇಕು ತಯಾರು ಮಾಡಿ ಇಡು ಗಂಡನನ್ನು ಕಳಿಸಿಕೊಡುತ್ತೇನೆ ಎಂದು ಹೇಳಿದ್ದು ಅದರಂತೆ ಪಿರ್ಯಾದಿದಾರರು ತಯಾರು ಮಾಡಿ ದಿನಾಂಕ 27/07/2025 ರಂದು ಸಂಜೆ ಸುಮಾರು 3:00 ಗಂಟೆಗೆ ಮಗಳು ಪವಿತ್ರಾಳಿಗೆ ಕರೆ ಮಾಡಿದಾಗ ಯಾರೋ ಒಬ್ಬರು ಹೆಂಗಸು ಕರೆಯನ್ನು ಸ್ವೀಕರಿಸಿ ಮಗಳು ಕುತ್ತಿಗೆಗೆ ಬಳ್ಳಿ ಹಾಕಿಕೊಂಡಿದ್ದಾಳೆ ಕೂಡಲೇ ಬನ್ನಿ ಎಂಬುವುದಾಗಿ ತಿಳಿಸಿದರು ಪಿರ್ಯಾದಿದಾರರು ವಾರಂಬಳ್ಳಿಯಿಂದ ತಲ್ಲೂರಿಗೆ ಬಂದು ನೋಡಿದಾಗ ಪವಿತ್ರ ಕಬ್ಬಿಣದ ಹುಕ್ಕಿಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಯಾವ ಕಾರಣಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಬಗ್ಗೆ ತಿಳಿದಿಲ್ಲ. ಗಂಡ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು ಎಂಬ ವಿಚಾರ ಪೋನ್‌ ನಲ್ಲಿ ಮಾತನಾಡುವಾಗ ಮಗಳ ಮಾತಿನಿಂದ ಅರ್ಥವಾಗುತ್ತಿತ್ತು ಪಿರ್ಯಾದಿದಾರರ ಮಗಳು ಪವಿತ್ರ ದಿನಾಂಕ 27/07/2025 ರಂದು ಸಂಜೆ 3:00 ಗಂಟೆಯಿಂದ 03:05 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿರಬಹುದಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯು.ಡಿ.ಆರ್‌ ಕ್ರಮಾಂಕ 40/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.