ಹತ್ಯೆಯ ಹಿಂದೆ ದುಬೈಯ ಉದ್ಯಮಿ ಹಾಗೂ ಮಹಿಳೆಯ ಕೈವಾಡ ಶಂಕೆ….
ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಪುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಮಿಷನ್ ಕಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ (27), ಕರಂಬಳ್ಳಿ ಜನತಾ ಕಾಲೊನಿಯ ಮೊಹಮದ್ ಶರೀಫ್ (37) ಮತ್ತು ಮಂಗಳೂರಿನ ಕೃಷ್ಣಾಪುರದ ಅಬ್ದುಲ್ ಶುಕುರ್ (43) ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿಗಳನ್ನು ಉಡುಪಿಯ ಜೆ ಎಂ ಎಫ್ ಸಿ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದ್ದು ಅವರಿಗೆ ಅ. 4ವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಸೈಫುದ್ದೀನ್ ಹತ್ಯೆಯ ಹಿಂದೆ ದುಬೈಯ ಉದ್ಯಮಿ ಮತ್ತು ಮಹಿಳೆಯ ಕೈವಾಡ ಶಂಕೆ ಇದೆ ಎನ್ನಲಾಗಿದ್ದು, ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ.
ಕೊಲೆ, ಹಲ್ಲೆ ಪ್ರಕಣಗಳಲ್ಲಿ ತೊಡಗಿ ರೌಡಿ ಶೀಟರ್ ಆಗಿದ್ದ ಸೈಫುದ್ದೀನ್ ಅವರನ್ನು ಆರೋಪಿಗಳು ಚೂರಿ ಹಾಗೂ ತಲವಾರಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.
ಆರೋಪಿಗಳನ್ನು ಉಡುಪಿ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು, ಅವರ ಮಾರ್ಗದರ್ಶನದಲ್ಲಿ, ರಾಮಚಂದ್ರ ನಾಯಕ್, ಪೊಲೀಸ್ ವೃತ್ತ ನಿರೀಕ್ಷಕರು, ಮಲ್ಪೆ ವೃತ್ತ ರವರ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು.

