ವೇಣೂರು : ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಸಮೀಪ ವ್ಯಕ್ತಿಯೊಬ್ಬರು ಅಡಿಕೆ ಮರದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಸಾವನ್ನಪ್ಪಿದ ವ್ಯಕ್ತಿ ಗಂಗಯ್ಯ ನಾಯ್ಕ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಪ್ರದೀಪ್ (31) ತಂದೆ: ಗಂಗಯ್ಯ ನಾಯ್ಕ ವಾಸ: ಹಿತ್ತಿಲು ಮನೆ, ಸುಲ್ಕೇರಿ ಮೊಗ್ರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ತಂದೆ ಗಂಗಯ್ಯ ನಾಯ್ಕ (62) ಎಂಬವರು ದಿನಾಂಕ: 22.08.2025 ರಂದು 12.45 ಗಂಟೆಗೆ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಸುಲ್ಕೇರಿ ಮೊಗ್ರು ಗ್ರಾಮದ ಹಿತ್ತಿಲು ಮನೆ ಎಂಬಲ್ಲಿ ಫಿರ್ಯಾದಿದಾರರೊಂದಿಗೆ ಸೇರಿಕೊಂಡು ತಮ್ಮ ಬಾಬ್ತು ಅಡಿಕೆ ತೋಟದಲ್ಲಿ ಅಡಿಕೆ ಮರಕ್ಕೆ ಹತ್ತಿ ಮದ್ದು ಸಿಂಪಡಿಸುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಕವುಚಿ ಬಿದ್ದು ಪ್ರಜ್ಞಾಹೀನರಾಗಿದ್ದವರನ್ನು ಫಿರ್ಯಾದಿದಾರರು ಮತ್ತಿತರರು ಸೇರಿ ಎತ್ತಿ ಉಪಚರಿಸಿ, ಅಂಬುಲೆನ್ಸ್ ವಾಹನವೊಂದರಲ್ಲಿ ಉಜಿರೆಯ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 18-2025 ಕಲಂ:194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.