ಬೈಂದೂರು: ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಇಬ್ಬರು ಕಳ್ಳರು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಳ್ಳತನ ಯತ್ನ ನಡೆದಿದೆ ಎಂದು ಶಾಖಾಧಿಕಾರಿಯಾದ ನಾಗೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ನಾಗೇಂದ್ರ (43), ಕೊಲ್ಲೂರು, ಬೈಂದೂರು ಇವರು ಶ್ರೀ ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರ ಸಂಘದ ಶಾಖಾಧಿಕಾರಿಯಾಗಿರುತ್ತಾರೆ. ಶಾಖೆಯ ಭದ್ರತೆಯ ಬಗ್ಗೆ Sign In Security CCTV ಕಂಪನಿಯ CCTV ಅಳವಡಿಸಿರುತ್ತಾರೆ. ದಿನಾಂಕ 19/07/2025 ರಂದು ಬೆಳಗಿನ ಜಾವ 02:45 ಗಂಟೆ ಸಮಯಕ್ಕೆ Sign In Security CCTV ಕಂಪನಿಯವರು ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರರ ಶಾಖೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಳ್ಳತನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು ಹಾಗೂ ಶಾಖಾ ಅಧ್ಯಕ್ಷರಾದ ಕೆ ಎಸ್ ಚಂದ್ರಶೇಖರ ರವರು ಸ್ಥಳಕ್ಕೆ ಬಂದಾಗ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಪರಾರಿಯಾಗಿರುತ್ತಾರೆ. ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡುವ ಉದ್ದೇಶದಿಂದ ಶಾಖೆಯ ಕಿಟಕಿಯ ಸರಳನ್ನು ಯಾವುದೋ ಹರಿತವಾದ ಆಯುಧದಿಂದ ತುಂಡು ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 137/2025 ಕಲಂ: 331(4),305, 62 BNS ರಂತೆ ಪ್ರಕರಣ ದಾಖಲಾಗಿರುತ್ತದೆ.