ಶಿರ್ವಾ: ಮಹಿಳೆಯೊಬ್ಬರ ಮೊಬೈಲ್ ಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಬೆದರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಸಂಭವಿಸಿದೆ.
ಶಿರ್ವಾ ನಿವಾಸಿ ಮೇರಿ ಎಂಬವರಿಗೆ ವಂಚನೆಯಾಗಿದೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಮೇರಿ ಇವರ ಮೊಬೈಲ್ ಗೆ ದಿನಾಂಕ 09/07/2025 ರಂದು ಮೊಬೈಲ್ ನಂಬ್ರಕ್ಕೆ ಕರೆ ಬಂದಿರುವುದನ್ನು ಅವರು ಸ್ವೀಕರಿಸಿದ್ದು, ಕರೆ ಮಾಡಿದ ವ್ಯಕ್ತಿಯು ಹಿಂದಿ ಭಾಷೆಯಲ್ಲಿ ನಿಮ್ಮ ಮೊಬೈಲ್ ನಂಬ್ರದಿಂದ ಕಂಪ್ಲೈಂಟ್ ಬಂದಿದೆ ಬಿಹಾರದ ನರೇಶ್ ಗೋಯಲ್ ಎಂಬ ಕೋಟ್ಯಾಧಿಪತಿ ಅವ್ಯವಹಾರ ನಡೆಸಿದ್ದು , ಅತನಿಂದ ನಿಮ್ಮ ಖಾತೆಗೆ ಹಣ ಬಿದ್ದಿರುತ್ತದೆ, ನಿಮ್ಮನ್ನು ಕೇಸಿನಿಂದ ತೆಗೆಯಬೇಕಾದರೆ ನಿಮ್ಮ ಖಾತೆಯಲ್ಲಿ ಹಣ ಇಲ್ಲ ಎಂಬುದಾಗಿ ಸರಕಾರಕ್ಕೆ ತೋರಿಸಬೇಕು ಎಂದು ಹೇಳಿದಾಗ ಪಿರ್ಯಾದಿದಾರರು ನಿರಾಕರಿಸಿರುತ್ತಾರೆ. ಆಗ ಕರೆ ಮಾಡಿದ ವ್ಯಕ್ತಿಯು, ಬೇರೆ ಅಧಿಕಾರಿಯವರೊಂದಿಗೆ ಮಾತನಾಡುವಂತೆ ಹೇಳಿ, ನಿಮ್ಮ ಮೇಲೆ ಮುಂಬಾಯಿಯ ಕೋಲಬಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ಬೆದರಿಸಿರುತ್ತಾನೆ. ಬಳಿಕ ಮೊಬೈಲ್ ಗೆ ಸಂದೀಪ್ ಜಾದವ್ ಎಂಬಾತನು ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿ ಪೊಲೀಸ್ ಟೀಂ ಇರುವ ವಿಡಿಯೋ ತೋರಿಸಿ, ಯಾರನ್ನೋ ಅವರು ಹಿಡಿದುಕೊಂಡು ಹೋಗುವ ದೃಶ್ಯವನ್ನು ಕೂಡಾ ತೋರಿಸಿ ಬೆದರಿಸಿದಾಗ, ಪಿರ್ಯಾದಿದಾರರು ಅವರು ಪೊಲೀಸರೆಂದು ನಂಬಿರುತ್ತಾರೆ. ಸಂದೀಪ್ ಜಾದವ್ ಎಂಬಾತನು ಪಿರ್ಯಾದಿದಾರರ ಬ್ಯಾಂಕ್ ವಿವರವನ್ನು ಮತ್ತು ಆಧಾರ್ ಕಾರ್ಡನ್ನು ವಿವರವನ್ನು ವಿಡಿಯೋ ಕಾಲ್ ಮಾಡಿ ಪಡೆದುಕೊಂಡಿರುತ್ತಾನೆ. ಆತನ ಬೆದರಿಕೆಯಿಂದ ಪಿರ್ಯಾದಿದಾರರು ದಿನಾಂಕ 14/07/2025 ರಂದು ಕೆನರ ಬ್ಯಾಂಕಿಗೆ ಹೋಗಿ RTGS ಮುಖಾಂತರ ರೂಪಾಯಿ 14,10,000/- ಮೊತ್ತವನ್ನು ಆತ ಹೇಳಿದ ಖಾತೆಗೆ ವರ್ಗಾಯಿಸಿ, ವಂಚನೆಗೆ ಒಳಗಾಗಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2025 ಕಲಂ: 316(2),318(2) BNS & ಕಲಂ: 66(ಸಿ), 66(ಡಿ) IT Act ರಂತೆ ಪ್ರಕರಣ ದಾಖಲಾಗಿರುತ್ತದೆ.