Home Crime ಕುಂದಾಪುರ : ಅಂದರ್ ಬಾಹರ್ ಜುಗಾರಿ ಆಟ : ನಾಲ್ಕು ಮಂದಿ ವಶಕ್ಕೆ…!!

ಕುಂದಾಪುರ : ಅಂದರ್ ಬಾಹರ್ ಜುಗಾರಿ ಆಟ : ನಾಲ್ಕು ಮಂದಿ ವಶಕ್ಕೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಹರೆಗೋಡು ದೈವಸ್ಥಾನದ ಹತ್ತಿರ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಅಂದರ್ ಬಾಹರ್ ಜುಗಾರಿ ಆಟಕ್ಕೆ ಬಳಸಲಾದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಸಾರಾಂಶ : ಭೀಮಾಶಂಕರ ಸಿನ್ನೂರ ಸಂಗಣ್ಣ, ಪಿಎಸ್‌ ಐ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಇಸ್ಪೀಟು ಜುಗಾರಿ ಆಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ 17:00 ಗಂಟೆಗೆ ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಹರೆಗೋಡು ಶ್ರೀ ನಂದಿಕೇಶ್ವರ ಸಹಪರಿವಾರ ದೈವಸ್ಥಾನದ ಹತ್ತಿರ ಕೆರೆಯ ಬದಿಯ ಖಾಲಿ ಜಾಗದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದವರ ಮೇಲೆ 17:20 ಗಂಟೆಗೆ ದಾಳಿ ನಡೆಸಿದ್ದು ಇಸ್ಪೀಟ್‌ ಜುಗಾರಿ ಆಡುತ್ತಿದ್ದ 4 ಜನರನ್ನು ವಶಕ್ಕೆ ಪಡೆದಿದ್ದು ಇಬ್ಬರು ಓಡಿ ತಪ್ಪಿಸಿಕೊಂಡಿರುತ್ತಾರೆ ನಂತರ ಸಿಕ್ಕ 4 ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಸಂಜೀವ, 2) ಚಂದ್ರ, 3) ಕೋಟಿ ಪೂಜಾರಿ, 4) ಸಂಪತ್ ಹಾಗೂ ಓಡಿ ಹೋದ 2 ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಗಣೇಶ್‌ ಸುಳ್ಸೆ 2) ಮಂಜುನಾಥ ಎಂಬುವುದಾಗಿ ತಿಳಿಸಿರುತ್ತಾರೆ. ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ್ದ ಪ್ಲಾಸ್ಟಿಕ್‌ ಶೀಟ್ ಮೇಲೆ ಇದ್ದ ಒಟ್ಟು 1,640/- ರೂಪಾಯಿ, 2) ನೀಲಿ ಬಣ್ಣದ ಪ್ಲಾಸ್ಟಿಕ್‌ -2, 3) 52 ಇಸ್ಪೀಟ್ ಎಲೆಗಳು, 4) ನೋಕಿಯಾ ಕಂಪೆನಿಯ ಕೀ-ಪ್ಯಾಡ್‌ ಮೊಬೈಲ್‌-01, 5) KA 20 EN 8303 ನಂಬ್ರದ ಹೀರೊ ಸ್ಪ್ಲೆಂಡರ್‌ ಮೋಟಾರು ಸೈಕಲ್‌ , 6) KA 20 MD 8950 ನಂಬ್ರದ Eeco ಕಾರನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 43/2025 ಕಲಂ: 87 KP Act ನಂತೆ ಪ್ರಕರಣ ದಾಖಲಾಗಿರುತ್ತದೆ.