Home Latest ಏ. 4 ರಂದು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪೋಷಕರಿಗಾಗಿ ಕಲಾಸೌರಭ ಕಾರ್ಯಕ್ರಮ…!!

ಏ. 4 ರಂದು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪೋಷಕರಿಗಾಗಿ ಕಲಾಸೌರಭ ಕಾರ್ಯಕ್ರಮ…!!

ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ “ಕಲಾಸೌರಭ” ಕಾರ್ಯಕ್ರಮವನ್ನು ಆಟಿಸಂ ಸೊಸೈಟಿ ಉಡುಪಿ ಮತ್ತು ಇನ್ನಿತರ ಸಮಾನ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಯೋಜಿಸುತ್ತಾ ಬಂದಿದ್ದೇವೆ. ಈ ವರ್ಷ “ಕಲಾಸೌರಭ” ಕಾರ್ಯಕ್ರಮವು “ವಿಶಿಷ್ಟತೆಗಳನ್ನು ಸಂಭ್ರಮಿಸಿ” ಎಂಬ ವಿಷಯವನ್ನು ಆಧರಿಸಿ ಏಪ್ರಿಲ್ 4 ಶನಿವಾರದಂದು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ಪೋಷಕರನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು. ಈ ಮೂಲಕ ಪೋಷಕರು ಸಾಮಾಜಿಕ ಕಳಂಕವನ್ನು ತೊಡೆದು ತಮ್ಮ ವಿಶೇಷ ಮಗುವಿನೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಬಾರಿಯ “ಕಲಾಸೌರಭ” ಟಿಎಂಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ, ಮಣಿಪಾಲ ಪೇಮೆಂಟ್ ಅಂಡ್ ಐಡೆಂಟಿಟಿ ಸೊಲ್ಯೂಷನ್, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಒನ್ ಗುಡ್ ಸ್ಟೆಪ್ ಬೆಂಗಳೂರು, ಹರ್ಷ ಉಡುಪಿ, ಗಾಯತ್ರಿ ಎಕ್ಸ್‌ಪೋರ್ಟ್ಸ್ ಕಾರ್ಕಳ, ಗೀತಾನಂದ ಫೌಂಡೇಶನ್ ಮಲೂರು, ಕೋಟ, ಈಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರು – ಇವರ ಸಹಕಾರದಲ್ಲಿ ನಡೆಯಲಿದೆ ಎಂದರು.

ಕಲಾಸೌರಭ’ದ ಉದ್ಘಾಟನಾ ಸಮಾರಂಭ ಏಪ್ರಿಲ್ 4 ರ ಬೆಳಿಗ್ಗೆ 9.45 ಗಂಟೆಗೆ ನಡೆಯಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಶ್ರೀಮತಿ ಸವಿತಾ ಸುಲುಗೋಡು ಅವರು, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿಯವರು ವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಡಾ. ವಿರೂಪಾಕ್ಷ ದೇವರಮನೆ, ಅಧ್ಯಕ್ಷರು ಆಟಿಸಂ ಸೊಸೈಟಿ ಆಫ್ ಉಡುಪಿ, ಶ್ರೀಮತಿ ಅಮಿತಾ ಪೈ ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ಬೆಂಗಳೂರು, ಶ್ರೀಮತಿ ಸ್ವಾತಿ ವಲ್ಲಾಳ್ ಸ್ಥಾಪಕರು ಈಶಾನ್ಯ ಇಂಡಿಯಾ ಫೌಂಡೇಶನ್ ಬೆಂಗಳೂರು, ಅಶೋಕ್ ಕುಮಾರ್ ನಿರ್ದೇಶಕರು ಪ್ರಕಾಶ್ ರೀಟೇಲ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಬೋಳ ಶ್ರೀನಿವಾಸ ಕಾಮತ್ ಮ್ಯಾನೇಜಿಂಗ್ ಡೈರೆಕ್ಟರ್ ಗಾಯತ್ರಿ ಎಕ್ಸಫೋರ್ಟ್ಸ್ ಕಾರ್ಕಳ, ಶ್ರೀ ಆನಂದ ಸಿ. ಕುಂದರ್ ಮ್ಯಾನೇಜಿಂಗ್ ಟ್ರಸ್ಟಿ ಗೀತಾನಂದ ಫೌಂಡೇಶನ್ ಮಣೂರು, ಕೋಟ ಶ್ರೀ ವಿಶಲ್ ಭಕ್ತ ಅಧ್ಯಕ್ಷರು ಸಂವೇದ ಪೋಷಕರ ಬೆಂಬಲ ಗುಂಪು ASU ಯವರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಗೌರವ ಅತಿಥಿಗಳಾಗಿ ಶ್ರೀಮತಿ ರತ್ನ ಸುವರ್ಣ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ, ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ. ರೋಟರಿ ಜಿಲ್ಲೆ 3182 ರ ಮಾಜಿ ಜಿಲ್ಲಾ ಗವರ್ನರ್ ಡಾ. ಗೌರಿ, ಆಭರಣ ಜ್ಯುವೆಲ್ಲರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸುಭಾಷ್ ಕಾಮತ್, ಉಡುಪಿ ಆಟಿಸಂ ಸೊಸೈಟಿಯ ಕಾರ್ಯದರ್ಶಿ ಶ್ರೀಮತಿ ರೂಪಾ ಮತ್ತು ಖಜಾಂಚಿ ಶ್ರೀ ಟೆಡ್ಡಿ ಅಂದ್ರೂ, ರಾಜ್ಯ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಕಾಂತಿ ಹರೀಶ್, ಜಿಲ್ಲಾ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಭಾಗವಹಿಸಲಿದ್ದಾರೆ.

ವಿಶೇಷ ಮಕ್ಕಳ ಪೋಷಕರಿಗೆ ಅಗತ್ಯವಾದ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಭಾಷಣಕಾರರಾಗಿ ಶ್ರೀಮತಿ ಸುಚಿತ್ರಾ ಸೋಮಶೇಖರಯ್ಯ ಸ್ಥಾಪಕರು ಸೃಷ್ಟಿ ಸ್ಪೆಷಲ್ ಅಕಾಡೆಮಿ ಬೆಂಗಳೂರು, ಶ್ರೀಮತಿ ತುಳಸಿ, ಸಹ ನಿರ್ದೇಶಕಿ ಸೇವಾ ಇನ್ ಆಕ್ಷನ್ ಬೆಂಗಳೂರು, ಡಾ. ರಾಘವೇಂದ್ರ ಭಟ್ ಪ್ರಾದೇಶಿಕ ಸಂಯೋಜಕರು, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಕೊಪ್ಪಳ, ಡಾ. ದೀಪಶ್ರೀ ನಿರ್ದೇಶಕರು, ವೈವಿಧ್ಯತೆ ಮತ್ತು ಸೇರ್ಪಡೆ ವಿವೇಕಾನಂದ ಸ್ಮಾರಕ ಆಸ್ಪತ್ರೆ ಮೈಸೂರು ಉಪನ್ಯಾಸ ನೀಡಲಿದ್ದಾರೆ.

ಮಕ್ಕಳ ವಿಶೇಷ ಅಗತ್ಯತೆಗಳಿಗೆ ಪೂರಕ ವಸ್ತುಗಳು, ಬಟ್ಟೆ, ಚಿಕಿತ್ಸಾ ಸಾಮಗ್ರಿಗಳು, ವೃತ್ತಿಪರ ಚಿಕಿತ್ಸೆಗಳ ಸ್ಟಾಲ್‌ಗಳು ಇರುತ್ತವೆ. ವಿಶೇಷ ಮಕ್ಕಳ ಚಿತ್ರಗಳು ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಸರ್ಕಾರಿ ಸೌಲಭ್ಯಗಳ ಮಾಹಿತಿ ಸ್ಟಾಲ್‌ಗಳು ಇರುತ್ತವೆ.

ಉಡುಪಿ ಜಿಲ್ಲೆಯ ಎಲ್ಲಾ ವಿಶೇಷ ಶಾಲೆಗಳ ಮಕ್ಕಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ಮಾಡಲಿದ್ದಾರೆ. ಸಾರ್ವಜನಿಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಬೇಕೆಂದು ಡಾ.ಭಂಡಾರಿ ವಿನಂತಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಡಾ.ವಿರೂಪಾಕ್ಷ ದೇವರಮನೆ , ಸೌಜನ್ಯಾ ಶೆಟ್ಟಿ ,ವಿಠಲ ಭಕ್ತ , ಕೀರ್ತೇಶ್ ಉಪಸ್ಥಿತರಿದ್ದರು.