ಕಾರ್ಕಳ: ಮುಂಡ್ಕೂರು ಗ್ರಾಮದ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಏ.01ರ ಬುಧವಾರದಂದು ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಜರುಗಲಿದ್ದು, ಸೋಮವಾರ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ ಸುನಿಲ್ ಕುಮಾರ್ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್ ಹಾಗೂ ಕಡಂದಲೆ ವೇದಮೂರ್ತಿ ಶ್ರೀ ಸ್ಕಂದ ಪ್ರಸಾದ ಭಟ್ ಅವರು ಶಾಸಕರಿಗೆ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶ್ರೀದೇವಿ ಪಾತ್ರಿ ಮತ್ತು ವ್ಯವಸ್ಥಾಪಕರಾದ ಕೇಶವ ಅಂಚನ್, ಸಂತೋಷ್ ಕೇಶವ ಅಂಚನ್, ಕೃಷ್ಣ ಸಾಲ್ಯಾನ್ ಸಂಕಲಕರಿಯ, ಕೃಷ್ಣ ಪೂಜಾರಿ ಪಾಲಡ್ಕ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಮುಂಡ್ಕೂರು ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಸೋಮನಾಥ ಪೂಜಾರಿ, ಮುಂಡ್ಕೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ದೇವಪ್ಪ ಸಫಳಿಗ, ಭಾಸ್ಕರ ಶೆಟ್ಟಿ, ಅಶೋಕ ಶೆಟ್ಟಿ, ಗೋಪಾಲ ಮೂಲ್ಯ ಮತ್ತಿತರರಿದ್ದರು.






