Home Crime ವಿಷ ಸೇವಿಸಿದ್ದ ಮಹಿಳೆ ಸಾವು…!!

ವಿಷ ಸೇವಿಸಿದ್ದ ಮಹಿಳೆ ಸಾವು…!!

ಪುಂಜಾಲಕಟ್ಟೆ : ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮೇ 23ರಂದು ಸಂಭವಿಸಿದೆ.

ಕರ್ಪೆಯ ಮಾಲುಕೋಡಿ ನಿವಾಸಿ ಸುರೇಶ್ ಪೂಜಾರಿ ಅವರ ಪತ್ನಿ ಶ್ವೇತಾ ( 29) ಮೃತಪಟ್ಟವರು.

ಅವರು ಮನೆ ಯಲ್ಲಿ ಇಲಿ ಪಾಷಾಣವನ್ನು ಸೇವಿಸಿದ್ದು, ಮಂಗಳೂರು ವೆನ್ಸಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆ ಬಗ್ಗೆ ಮೃತರ ತಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.