ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ದಿನಾಂಕ 31-03-2026 ರಂದು ತಮ್ಮ ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಸುಮಾರು 20ಕ್ಕೂ ಅಧಿಕ ವರ್ಷಗಳಿಂದ ವಾಸವಾಗಿರುವ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಣಗುಡ್ಡೆ ನಿವಾಸಿ ಮಂಜುಳಾ ರಾಣಿ, ವಿಮಲಾ ಅಮೀನ್, ಮೂಡಬೆಟ್ಟು ಗ್ರಾಮದ ಇಂದಿರಾ ಆಚಾರ್ಯ, ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಭವಿತಾ, ಪಾದೆಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಿಜ ಸೇರಿದಂತೆ ಒಟ್ಟು 5 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.
ಉಪನಿರ್ದೇಶಕರು ಗ್ರಾಮಾಂತರ ಕೈಗಾರಿಕೆ ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ ಗರಿಷ್ಠ 8000 ವರೆಗೆ ಟೈಲರಿಂಗ್, ಮರಗೆಲಸ, ಗಾರೆಕೆಲಸ, ಎಲೆಕ್ಟ್ರೀಶೀಯನ್, ಬ್ಯೂಟಿಪಾರ್ಲರ್, ಕ್ಷೌರಿಕ ವೃತ್ತಿಯವರಿಗೆ ಸೇರಿದಂತೆ ಒಟ್ಟು 81 ಫಲಾನುಭವಿಗಳಿಗೆ ಉಚಿತ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು.





