Home Crime ನವಜಾತ ಶಿಶು ಮಾರಾಟ ಪ್ರಕರಣ: ಕಾಮತ್ ನರ್ಸಿಂಗ್ ಹೋಂ ನ ವೈದ್ಯ ಸೇರಿ ಇಬ್ಬರು ಅರೆಸ್ಟ್..!!

ನವಜಾತ ಶಿಶು ಮಾರಾಟ ಪ್ರಕರಣ: ಕಾಮತ್ ನರ್ಸಿಂಗ್ ಹೋಂ ನ ವೈದ್ಯ ಸೇರಿ ಇಬ್ಬರು ಅರೆಸ್ಟ್..!!

ಉಡುಪಿ : ನವಜಾತ ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್ ನ ವೈದ್ಯ ಸೇರಿದಂತೆ ಇಬ್ಬರನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾಮತ್ ನರ್ಸಿಂಗ್ ಹೋಮ್ ನ ಡಾ. ಸುರೇಂದ್ರ ಹಾಗು ಮಲ್ಪೆ ನೇಜಾರು ನಿವಾಸಿ ಪ್ರಕಾಶ್ ಬಂಧಿತ ಆರೋಪಿಗಳು.

ಸುಬ್ರಹ್ಮಣ್ಯ ನಗರದ ನವಜಾತ ಶಿಶುವೊಂದನ್ನು ಪ್ರಕಾಶ್ ಎಂಬವರಿಗೆ ಮಾರಾಟ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಮಹಿಳಾ ಠಾಣೆಯ ಪೊಲೀಸರು ಸಾಕ್ಷ್ಯಧಾರಗಳ ಆಧಾರದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.